ವಿಠಲ ನಾಯ್ಕ್ ಮತ್ತು ಭವ್ಯ 
ರಾಜ್ಯ

ಉಡುಪಿ: ಗರ್ಭಿಣಿ ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಯತ್ನ; ಹೆಂಡ್ತಿ ಬದುಕುಳಿಯುತ್ತಿದ್ದಂತೆ ಪ್ರೇಯಸಿ ಜತೆ ಪತಿ ಆತ್ಮಹತ್ಯೆ!

ಮೃತರನ್ನು ವಿಠಲ ನಾಯ್ಕ್(35) ಮತ್ತು ಭವ್ಯ(33) ಎಂದು ಗುರುತಿಸಲಾಗಿದ್ದು, ಸೌಪರ್ಣಿಕ ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನೇಣು‌ ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಉಡುಪಿ: ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಮಾಡಲು ಯತ್ನಿಸಿದ್ದು, ನಂತರ ಆಕೆ ಬದುಕುಳಿಯುತ್ತಿದ್ದಂತೆಯೇ ಪ್ರೇಯಸಿ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆಯಲ್ಲಿ ನಡೆದಿದೆ.

ಮೃತರನ್ನು ಗೋಳಿಹೊಳೆಯ ಚಾರ್ತಾಲಿ ಗ್ರಾಮದ ನಿವಾಸಿಗಳಾದ ವಿಠಲ ನಾಯ್ಕ್(35) ಮತ್ತು ಭವ್ಯ(33) ಎಂದು ಗುರುತಿಸಲಾಗಿದ್ದು, ಸೌಪರ್ಣಿಕ ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನೇಣು‌ ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಆಟೋ ಚಾಲಕನಾಗಿದ್ದ ವಿಠಲ ನಾಯ್ಕ್, ಟೈಲರ್ ವೃತ್ತಿ ಮಾಡಿಕೊಂಡಿದ್ದ ಭವ್ಯ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಸುಮಾರು 20 ದಿನಗಳ ಹಿಂದೆ ವಿಠಲ ನಾಯ್ಕ್ ತನ್ನ ಪ್ರೇಯಸಿ ಭವ್ಯ ಅವರನ್ನು ನರ್ಸ್ ಎಂದು ಗರ್ಭಿಣಿ ಪತ್ನಿಗೆ ಪರಿಚಯಿಸಿದ್ದ. ಬಳಿಕ ಪತ್ನಿಗೆ ವಿಷದ ಇಂಜೆಕ್ಷನ್ ಕೊಡಿಸಿ, ಪ್ರೇಯಸಿಯೊಂದಿಗೆ ಊರು ಬಿಟ್ಟು ಪರಾರಿಯಾಗಿದ್ದ.

ವಿಷ ಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ ಪತ್ನಿಯನ್ನು ಸ್ಥಳೀಯರು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪತ್ನಿ ಬದುಕುಳಿದ ಬೆನ್ನಲ್ಲೇ ಆತ್ಮಹತ್ಯೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿ ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗುತ್ತಿದ್ದಂತೆಯೇ, ಇತ್ತ ಗೋಳಿಹೊಳೆಯ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವಿಠಲ ನಾಯ್ಕ್ ಹಾಗೂ ಭವ್ಯ ಅವರ ಶವಗಳು ಪತ್ತೆಯಾಗಿವೆ. ಪತ್ನಿ ಬದುಕುಳಿದಿರುವ ವಿಷಯ ತಿಳಿದು, ಇಬ್ಬರೂ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಕಮಿಷನ್; ನವೆಂಬರ್ ಒಳಗೆ ಬಾಕಿ ಬಿಲ್​​ ಪಾವತಿಸದಿದ್ದರೆ ದಾಖಲೆ ಬಿಡುಗಡೆ: ಮತ್ತೆ ಸಿಡಿದೆದ್ದ ಗುತ್ತಿಗೆದಾರರು

SIR ಪ್ರಕ್ರಿಯೆ ಪೂರ್ಣಗೊಂಡ ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಲ್ಲಿ ಫಾರ್ಮ್-6 ರದ್ದು: ಕೇಂದ್ರ ಚುನಾವಣಾ ಆಯೋಗ

'ಪ್ರಜಾಪ್ರಭುತ್ವ ಉಳಿಸಿ' ರ‍್ಯಾಲಿ ನಡೆಸಲು 'ಇಂಡಿಯಾ' ಮೈತ್ರಿಕೂಟ ನಿರ್ಧಾರ; ಅ. 6 ರಂದು ಚು. ಆಯೋಗದ ಕಡೆಗೆ ವಿಪಕ್ಷ ಸಂಸದರ ನಡೆ!

ಪೈಲಟ್‌ಗಳ ನಡುವೆ ಜಗಳ, ಹೈಜಾಕ್ ಅಲರ್ಟ್; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್: ಆಗಿದ್ದೇನು?

'ಹಾದಿ ತಪ್ಪಿದ ಕಂಗನಾ'; ರಾಜಕೀಯ ಅಬ್ಬರದಲ್ಲಿ ವ್ಯಕ್ತಿತ್ವ ಕಳೆದುಕೊಂಡ 'ಕ್ವೀನ್': ಕಿಡಿ ಹೊತ್ತಿಸಿದ ರಾಜೀವ್ ಮಸಂದ್!