ಮುಂಬೈ ಕರಾವಳಿಯಲ್ಲಿ ಶಂಕಿತ ಬೋಟ್ ಪತ್ತೆ
ಮುಂಬೈ ಕರಾವಳಿ ತೀರದಲ್ಲಿ ಶಂಕಿತ ಬೋಟ್ ವೊಂದು ಪತ್ತೆಯಾಗಿದ್ದು, ಕರಾವಳಿ ರಕ್ಷಣಾ ಪಡೆಗಳು ಅದರ ಬೆನ್ನಟ್ಟಿ ತಪಾಸಣೆಯಲ್ಲಿ ತೊಡಗಿವೆ.
ಮುಂಬೈ: ಮುಂಬೈ ಕರಾವಳಿ ತೀರದಲ್ಲಿ ಶಂಕಿತ ಬೋಟ್ವೊಂದು ಪತ್ತೆಯಾಗಿದ್ದು, ಕರಾವಳಿ ರಕ್ಷಣಾ ಪಡೆಗಳು ಅದರ ಬೆನ್ನಟ್ಟಿ ತಪಾಸಣೆಯಲ್ಲಿ ತೊಡಗಿವೆ.
ಮುಂಬೈ ಕರಾವಳಿ ತೀರದಿಂದ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಚಲಿಸುತ್ತಿರುವ ಬೋಟ್ನಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ಗಳು ಪತ್ತೆಯಾಗಿವೆ. 'ಎಂಎಸ್ವಿ ಯೂಸುಫಿ' ಎಂಬ ಪುಟ್ಟ ಪ್ರಯಾಣಿಕರ ಬೋಟ್ ಸಂಶಯಾಸ್ಪದವಾಗಿ ತಿರುಗಾಡುತ್ತಿದೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ಕರಾವಳಿ ರಕ್ಷಣಾಪಡೆಗಳ ಪ್ರಕಾರ ಶಂಕಿತ ಬೋಟ್ ದುಬೈನಿಂದ ಬಂದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಸ್ಥಳೀಯ ಮೀನುಗಾರರು ನೀಡಿದ ಮಾಹಿತಿಯ ಮೇರೆಗೆ ತುರ್ತು ಕಾರ್ಯಾಚರಣೆ ನಡೆಸಿದ ಕರಾವಳಿ ರಾಕ್ಷಣಾ ಪಡೆ, ಬೋಟ್ ಅನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಇದೀಗ ಬೋಟ್ನಲ್ಲಿದ್ದ ಐವರು ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು, ಅವರನ್ನು ವಿಚಾರಣೆ ನಡೆಸುತ್ತಿರುವ ರಕ್ಷಣಾ ಪಡೆಯ ಸಿಬ್ಬಂದಿಗಳು ಐದು ತುರಾಯಾ ಸ್ಯಾಟೆಲೈಟ್ ಫೋನ್ಗಳನ್ನು ವಶಪಡೆಸಿಕೊಂಡಿದ್ದಾರೆ.
26/11 ನಂತಹ ಘೋರ ದಾಳಿ ಇನ್ನೂ ಹಚ್ಚ ಹಸಿರಾಗಿರುವಾಗಲೇ ಮುಂಬೈ ಕರಾವಳಿ ತೀರದಲ್ಲಿ ಮತ್ತೆ ಶಂಕಾಸ್ಪದ ಬೋಟ್ ಪತ್ತೆಯಾಗಿರುವುದು ಮುಂಬೈ ಜನತೆಯಲ್ಲಿ ಭೀತಿ ಮೂಡಿಸಿದೆ.