ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾರ್ಪೋರೇಟರ್ ಗೌರಮ್ಮಗೆ ಜಾಮೀನು

ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿ ಕಾರ್ಪೋರೇಟರ್ ಗೌರಮ್ಮ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Srinivasa Murthy VN
Updated On : 5 Apr 2013, 5:55 am

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿ ಕಾರ್ಪೋರೇಟರ್ ಗೌರಮ್ಮ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅಜಾದ್‌ನಗರದ ಕಾರ್ಪೋರೇಟರ್ ಗೌರಮ್ಮ ಅವರಿಗೆ ಬೆಂಗಳೂರಿನ 4ನೇ ತ್ವರಿತಗತಿ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ. 1 ಲಕ್ಷ ರುಪಾಯಿ ಮೌಲ್ಯದ ಭದ್ರತಾ ಠೇವಣಿ ಮತ್ತು ಇಬ್ಬರು ವ್ಯಕ್ತಿಗಳ ಶೂರಿಟಿಯ ಮೇರೆಗೆ ಗೌರಮ್ಮ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಗೌರಮ್ಮ ಅವರಿಗೆ ಕೆಲವು ಎಚ್ಚರಿಕೆಗಳನ್ನು ನೀಡಿರುವ ನ್ಯಾಯಾಲಯ, ಸಾಕ್ಷಿಗಳನ್ನು ನಾಶಪಡಿಸದಂತೆಯೂ, ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆಯೂ ಸೂಚನೆ ನೀಡಿದೆ. ಅಲ್ಲದೆ ನ್ಯಾಯಾಲಯದ ಅನುಮತಿ ಪಡೆಯದೇ ವಿದೇಶಕ್ಕೆ ಹೋಗದಂತೆ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಅಜಾದ್‌ನಗರದ ಕಾರ್ಪೋರೇಟರ್ ಆಗಿರುವ ಗೌರಮ್ಮ ಅವರ ಅಕ್ರಮ ಆಸ್ತಿ ಗಳಿಕೆಯನ್ನು ಲಿಂಗರಾಜು ಎಂಬ ಆರ್‌ಟಿಐ ಕಾರ್ಯಕರ್ತ ಮಾಹಿತಿ ಹಕ್ಕಿನ ಮೂಲಕ ಬಯಲಿಗೆಳೆದಿದ್ದ. ನಂತರ ಲಿಂಗರಾಜು ಅಜಾದ್‌ನಗರದ ತಮ್ಮ ಮನೆಯ ಎದುರೇ ಭೀಕರವಾಗಿ ಹತ್ಯೆಗೊಳಗಾಗಿದ್ದ. ಗೌರಮ್ಮ ಅವರ ಪತಿ ಗೋವಿಂದರಾಜು ಅವರು ಕೆಲ ರೌಡಿಗಳಿಗೆ ಸುಪಾರಿ ನೀಡಿ ಲಿಂಗರಾಜು ಅವರನ್ನು ಹತ್ಯೆ ಮಾಡಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಹಂತಕರನ್ನು ಬಂಧಿಸಿದ್ದ ಪೊಲೀಸರು ಅವರು ನೀಡಿದ ಸಾಕ್ಷಿಯ ಮೇರೆಗೆ ಗೌರಮ್ಮ ಪತಿ ಗೋವಿಂದರಾಜು ಅವರನ್ನು ಕೂಡಲೇ ಬಂಧಿಸಿದ್ದರು. ಪ್ರಕರಣ ನಂತರ ತಲೆ ಮರೆಸಿಕೊಂಡಿದ್ದ ಗೌರಮ್ಮ ಅವರನ್ನು ಕರ್ನಾಟಕ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement