ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಟಾರ್ನಿ ಜನರಲ್ ಕ್ಷಮೆ ಕೋರಿದ ಒಬಾಮ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅವರ ಕ್ಷಮೆ ಕೋರಿದ್ದಾರೆ.

Srinivasa Murthy VN
Updated On : 6 Apr 2013, 3:53 am

ವಾಷಿಂಗ್‌ಟನ್: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅವರ ಕ್ಷಮೆ ಕೋರಿದ್ದಾರೆ.

ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿರುವ ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಅವರ ಬಗ್ಗೆ ಗುರುವಾರ ಒಬಾಮ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅಧ್ಯಕ್ಷ ಒಬಾಮ ಕ್ಷಮೆ ಕೋರಿದ್ದಾರೆ. ವಾಯು ಸೇನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಒಬಾಮ ಕಾರ್ಯಕ್ರಮ ಮುಗಿದ ಕೂಡಲೇ ಕಮಲಾ ಹ್ಯಾರಿಸ್ ಅವರನ್ನು ಕರೆಸಿ ಕ್ಷಮೆ ಕೋರಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿಯಾಗಿರುವ ಜೇ ಕಾರ್ನಿ ಅವರು ಮಾತನಾಡಿ, 'ಕಮಲಾ ಹ್ಯಾರಿಸ್ ಮತ್ತು ಒಬಾಮ ಬಹುಕಾಲದ ಮಿತ್ರರು. ಆ ಸಲಿಗೆಯಿಂದ ಒಬಾಮ ಹೇಳಿಕೆ ನೀಡಿದ್ದರು. ಅವರಿಗೆ ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶವಿರಲ್ಲಿಲ್ಲ. ಹ್ಯಾರಿಸ್ ಓರ್ವ ಪ್ರಮಾಣಿಕ ಅಟಾರ್ನಿ ಜನರಲ್. ಅವರ ಬಗ್ಗೆ ಒಬಾಮ ಅವರಿಗೆ ತುಂಬಾ ಗೌರವವಿದೆ. ಅವರ ಚಾರಿತ್ರ್ಯಕ್ಕೆ ದಕ್ಕೆ ಮಾಡುವ ಮನೋಭಾವ ಅವರಿಗಿಲ್ಲ' ಎಂದು ಸ್ಪಷ್ಟಪಡಿಸಿದರು.

ಗುರುವಾರ ಬೆಳಗ್ಗೆ ಅಧ್ಯಕ್ಷ ಬರಾಕ್ ಒಬಾಮ ಅವರು ಸ್ಯಾನ್ ಫ್ರ್ಯಾನ್ಸಿಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಮಾತನಾಡಿದ ಅವರು ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಅಗಿರುವ ಕಮಲಾ ಹ್ಯಾರಿಸ್ ಅವರು ಬುದ್ಧಿವಂತೆ, ತುಂಬಾ ಕಠಿಣ ಮತ್ತು ಸಮರ್ಪಣಾ ಮನೋಭಾವ ಉಳ್ಳವರು, ಅಂತೆಯೇ ಆಕೆ ದೇಶದ 'ಸುಂದರ ಅಟಾರ್ನಿ ಜನರಲ್‌' ಎಂದು ಹೇಳಿದ್ದರು.

ಒಬಾಮ ಅವರ ಹೇಳಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ ಈ ಹೇಳಿಕೆ ಒಬಾಮ ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನಲೆ ಇಂದು ಒಬಾಮ ಅವರು ಕಮಲಾ ಹ್ಯಾರಿಸ್ ಅವರ ಕ್ಷಮೆಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement