ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುನ್ನಾಭಾಯ್ ಗೆ ದಿನವಿಡೀ ಕೆಲಸ

ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಈಗ ಹಗಲು-ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.

Srinivasa Murthy VN
Updated On : 6 Apr 2013, 6:19 am

ಮುಂಬೈ: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಈಗ ಹಗಲು-ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.

ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ 5 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್, ನ್ಯಾಯಾಲಯಕ್ಕೆ ಶರಣಾಗುವ ಮುನ್ನವೇ ತಾವು ಸಹಿ ಮಾಡಿರುವ ಸಿನಿಮಾಗಳನ್ನು ಮುಗಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ.

ಇದಕ್ಕಾಗಿ 2 ಶಿಫ್ಟ್ ಗಳನ್ನು ಹಾಕಿಕೊಂಡಿರುವ ಸಂಜಯ್ ದತ್, ಹಗಲಿನ ವೇಳೆಯನ್ನು ಚಿತ್ರೀಕರಣಕ್ಕಾಗಿ ಮತ್ತು ರಾತ್ರಿ ವೇಳೆಯನ್ನು ಡಬ್ಬಿಂಗ್ ಮಾಡಲು ಮೀಸಲಿಟ್ಟಿದ್ದಾರೆ. ಮೂಲಗಳ ಪ್ರಕಾರ ಪ್ರಸ್ತುತ ಸಂಜಯ್‌ದತ್, ರಾಹುಲ್ ಅಗರ್ವಾಲ್ ನಿರ್ದೇಶಿಸುತ್ತಿರುವ 'ಪೊಲೀಸ್‌ಗಿರಿ' ಎಂಬ ಚಿತ್ರದ ಚಿತ್ರೀಕರಣದಲ್ಲಿ ಬಿಸಿಯಾಗಿದ್ದು, ಮನೆಗೂ ಸಹ ಹೋಗದೆ ರಾತ್ರಿ ವೇಳೆ ಚಿತ್ರದ ಡಬ್ಬಿಂಗ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮುನ್ನಾಬಾಯಿಯ ಈ ನಿರ್ಧಾರವನ್ನು ಹೊಗಳಿರುವ ಚಿತ್ರದ ನಿರ್ದೇಶಕ ರಾಹುಲ್ ಅಗರ್ವಾಲ್, ನ್ಯಾಯಾಲಯ ನೀಡಿರುವ ಗಡುವಿನ ಒಳಗೆ ತಾವು ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿಕೊಡಲು ಸಂಜಯ್ ಶ್ರಮಿಸುತ್ತಿದ್ದಾರೆ. ಇದು ಅವರ ವೃತ್ತಿಪರತೆಯನ್ನು ತೋರಿಸುತ್ತದೆ. ಸಮಯ ಕಡಿಮೆ ಇರುವುದರಿಂದ ನಾವು ಹಗಲು ಚಿತ್ರೀಕರಣ ನಡೆಸಿ ರಾತ್ರಿ ವೇಳೆಯಲ್ಲಿ ಡಬ್ಬಿಂಗ್ ಮಾಡುತ್ತಿದ್ದೇವೆ. ಇದರಿಂದ ಸಂಜಯ್ ದತ್ ಅವರ ಇತರೆ ಸಿನಿಮಾಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement