ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

8 ಮಂದಿಯ ಗಲ್ಲಿಗೆ 'ಸುಪ್ರೀಂ' ತಡೆ

ರಾಷ್ಟ್ರಪತಿಗಳಿಂದ ಕ್ಷಮಾದಾನ ತಿರಸ್ಕೃತಗೊಂಡಿದ್ದ 8 ಮಂದಿಯ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

Srinivasa Murthy VN
Updated On : 7 Apr 2013, 6:29 am

ನವದೆಹಲಿ: ರಾಷ್ಟ್ರಪತಿಗಳಿಂದ ಕ್ಷಮಾದಾನ ತಿರಸ್ಕೃತಗೊಂಡಿದ್ದ 8 ಮಂದಿಯ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 8 ಮಂದಿಯ ಮರಣದಂಡನೆಗೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ತಡೆ ನೀಡಿದೆ. ಕಳೆದ ವಾರವಷ್ಟೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ 8 ಮಂದಿಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. ಇದರ ಬೆನ್ನಲ್ಲೇ ಆರೋಪಿಗಳ ಪರ ವಕೀಲರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.

ನಿನ್ನೆ ಸಂಜೆ ನ್ಯಾ.ಪಿ.ಸತ್ಯಂ ಅವರು ತಮ್ಮ ನಿವಾಸದಲ್ಲಿ ತುರ್ತು ವಿಚಾರಣೆ ನಡೆಸಿದ್ದು, ಜಂಟಿ ನ್ಯಾಯಾಧೀಶರಾದ ನ್ಯಾ. ಇಕ್ಬಾಲ್ ಅವರು ಈ ಬಗ್ಗೆ ವರದಿ ನೀಡುವಂತೆ ಸಂಬಂಧಪಟ್ಟ ವಕೀಲರಿಗೆ ಆದೇಶ ನೀಡಿದ್ದಾರೆ. ಅಲ್ಲದೆ ಗಲ್ಲು ಶಿಕ್ಷೆ ಪ್ರಧಾನಕ್ಕೆ ನಾಲ್ಕು ವಾರಗಳ ತಡೆ ನೀಡಿದ್ದಾರೆ.

ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶದ ಗುರ್ಮೀತ್ ಸಿಂಗ್, ಸುರೇಶ್, ಜಾಫರ್ ಅಲಿ ಮತ್ತು ರಾಮಜೀ, ಕರ್ನಾಟಕದ ಪ್ರವೀಣ್ ಕುಮಾರ್, ಉತ್ತರಾಖಂಡದ ಸುಂದರ್ ಸಿಂಗ್, ಹರ್ಯಾಣದ ಮಾಜಿ ಶಾಸಕರ ಪುತ್ರಿ ಸೋನಿಯಾ ಮತ್ತು ಆಕೆಯ ಪತಿ ಸಂಜೀವ್ ಅವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.

ಈ ಎಲ್ಲ ಅಪರಾಧಿಗಳು ಕ್ಷಮೆ ಕೋರಿ ರಾಷ್ಟ್ರಪತಿಗಳ ಬಳಿ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕಳೆದ ವಾರ ಈ ಎಲ್ಲಾ ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರಸ್ಕರಿಸಿದ್ದರು. ರಾಷ್ಟ್ರಪತಿಗಳ ಕ್ಷಮಾದಾನ ತಿರಸ್ಕಾರವನ್ನು ಪ್ರಶ್ನಿಸಿ ನಾಗರೀಕ ಹಕ್ಕುಗಳ ಪ್ರಜಾಪ್ರಭುತ್ವ ಒಕ್ಕೂಟ(ಪಿಯುಡಿಆರ್) ಸುಪ್ರೀಂ ಕೋರ್ಟ್ನಲ್ಲಿ ತುರ್ತು ವಿಚಾರಣೆಗಾಗಿ ಅರ್ಜಿ ಸಲ್ಲಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement