ಅಗ್ನಿ 2 ಯಶಸ್ವಿ ಉಡಾವಣೆ
ಅತ್ಯಾಧುನಿಕ ಅಗ್ನಿ 2 ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಉಡಾಯಿಸಲಾಗಿದೆ.
ಬಲಾಸೋರ್: ಅತ್ಯಾಧುನಿಕ ಅಗ್ನಿ 2 ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಉಡಾಯಿಸಲಾಗಿದೆ.
ಡಿಆರ್‌ಡಿಒ ನಿರ್ಮಾಣದ ಅಗ್ನಿ 2 ಕ್ಷಿಪಣಿಯನ್ನು ಒಡಿಶಾದ ಕರಾವಳಿ ತೀರದಲ್ಲಿರುವ ದ್ವೀಪದಿಂದ ಉಡಾಯಿಸಲಾಗಿದ್ದು, ನಿಗದಿತ ಸಮಯದಲ್ಲಿ ನಿಗದಿತ ದೂರವನ್ನು ಕ್ರಮಿಸುವ ಮೂಲಕ ಅಗ್ನಿ 2 ಕ್ಷಿಪಣಿ ಯಶಸ್ವಿಯಾಗಿದೆ.
ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯಬಲ್ಲ ಈ ಕ್ಷಿಪಣಿಯು ಸುಮಾರು 2000 ಕಿ.ಮೀ. ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 20 ಮೀಟರ್ ಉದ್ದವಿರುವ ಈ ಕ್ಷಿಪಣಿ ಸುಮಾರು 17 ಟನ್‌ಗಳಷ್ಟು ಭಾರವನ್ನು ಹೊತ್ತೋಯ್ಯುವ ಸಾಮರ್ಥ್ಯವಿದೆ.
ಅತ್ಯಾಧುನಿಕ ನ್ಯಾವಿಗೇಷನ್ ವ್ಯವಸ್ಥೆ ಹೊಂದಿರುವ ಈ ಕ್ಷಿಪಣಿಯನ್ನು ಮೊಬೈಲ್ ಲಾಂಚರ್‌ಗಳ ಮೂಲಕ ಇಂದು ಬೆಳಗ್ಗೆ 10:30ಕ್ಕೆ ಉಡಾಯಿಲಾಗಿದೆ. ಶೀಘ್ರದಲ್ಲಿಯೇ ಮತ್ತೊಂದು ಸುತ್ತಿನ ಪರೀಕ್ಷಾ ಉಡಾವಣೆ ನಂತರ ರಕ್ಷಣಾ ವ್ಯವಸ್ಥೆಗೆ ಸೇರಿಸುವ ಉದ್ದೇಶ ಹೊಂದಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.