ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚುನಾವಣೆ ಸೌಂದರ್ಯ ಸ್ಪರ್ಧೆಯಲ್ಲ: ಜೈ ರಾಮ್ ರಮೇಶ್

ಚುನಾವಣೆ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಪೈಪೋಟಿ ಅಥವಾ ರಾಜಕೀಯ ಪಕ್ಷಗಳ ಸೌಂದರ್ಯ ಸ್ಪರ್ಧೆಯಲ್ಲ ಎಂದು ಕೇಂದ್ರ ಸಚಿವ ಜೈ ರಾಮ್ ರಮೇಶ್ ಹೇಳಿದ್ದಾರೆ.

Srinivasa Murthy VN
Updated On : 13 Apr 2013, 7:57 am

ಅಹ್ಮದಾಬಾದ್: ಚುನಾವಣೆ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಪೈಪೋಟಿ ಅಥವಾ ರಾಜಕೀಯ ಪಕ್ಷಗಳ ಸೌಂದರ್ಯ ಸ್ಪರ್ಧೆಯಲ್ಲ ಎಂದು ಕೇಂದ್ರ ಸಚಿವ ಜೈ ರಾಮ್ ರಮೇಶ್ ಹೇಳಿದ್ದಾರೆ.

ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಪೈಪೋಟಿ ಕುರಿತು ಮಾತನಾಡಿದ ಜೈ ರಾಮ್ ರಮೇಶ್, ಭಾರತದಲ್ಲಿ ನಡೆಯುವ ಚುನಾವಣೆಗಳು ಇಬ್ಬರು ವ್ಯಕ್ತಿ ಅಥವಾ ವ್ಯಕ್ತಿತ್ವಗಳ ನಡುವೆ ನಡೆಯುವ ಪೈಪೋಟಿ ಅಥವಾ ರಾಜಕೀಯ ಪಕ್ಷಗಳ ಸೌಂದರ್ಯ ಸ್ಪರ್ಧೆಯಲ್ಲ ಎಂದು ಹೇಳಿದರು.

'ಭಾರತದಲ್ಲಿ ಚುನಾವಣೆಗೆ ತನ್ನದೇ ಆದ ಮಹತ್ವವಿದೆ. ಅದನ್ನು ಯಾರೂ ಕೂಡ ಕ್ಷುಲ್ಲಕಗೊಳಿಸಬಾರದು. ವ್ಯಕ್ತಿ ಅಥವಾ ವ್ಯಕ್ತಿತ್ವಗಳ ನಡುವೆ ಪೈಪೋಟಿ ಏರ್ಪಡಲು ಅಮೆರಿಕದಲ್ಲಿ ಇರುವಂತೆ ನಮ್ಮಲ್ಲಿ ಅಧ್ಯಕ್ಷೀಯ ವ್ಯವಸ್ಥೆ ಇಲ್ಲ. ಇಲ್ಲಿ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತವೆಯೇ ಹೊರತು ವ್ಯಕ್ತಿತ್ವಗಳಲ್ಲ'.

'ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚುನಾವಣೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ತನ್ನ ಸಂಪೂರ್ಣ ಶಕ್ತಿಯಿಂದ ಸ್ಪರ್ಧಿಸುತ್ತದೆ. ಯುಪಿಎಗೆ ಮಹಾರಾಷ್ಟ್ರ, ಕೇರಳ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತನ್ನದೇ ಆದ ಅಂಗಪಕ್ಷಗಳಿವೆ. ಎಲ್ಲ ಪಕ್ಷಗಳೂ ಗೆಲುವಿಗಾಗಿ ಸ್ಪರ್ಧಿಸಲಿವೆ' ಎಂದು ಸಚಿವ ಜೈರಾಮ್ ರಮೇಶ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement