ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿಗೆ ಜೆಡಿ(ಯು) ಸೆಡ್ಡು: ಪ್ರಧಾನಿ ರೇಸ್‌ನಲ್ಲಿ ನಿತೀಶ್

2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗುವ ಕುರಿತು ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ.

Srinivasa Murthy VN
Updated On : 13 Apr 2013, 3:40 am

ನವದೆಹಲಿ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2014ರ ಲೋಕಸಭಾ ಚುನಾವಣಾ ಕಣದಲ್ಲಿ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗುವ ಕುರಿತು ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಪ್ರಬಲ ಮಿತ್ರ ಪಕ್ಷವಾಗಿರುವ ಜೆಡಿ(ಯು), ಈಗ ಬಿಜೆಪಿಗೆ ಹೊಸ ತಲೆನೋವಾಗಿದೆ. ಇಷ್ಟು ದಿನ ಪ್ರಧಾನಿ ಕಣದಲ್ಲಿ ಯುಪಿಎ ಒಕ್ಕೂಟದಿಂದ ರಾಹುಲ್ ಗಾಂಧಿ ಅಥವಾ ಮನಮೋಹನ್ ಸಿಂಗ್ ಮತ್ತು ಎನ್‌ಡಿಎ ಒಕ್ಕೂಟದಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಹಾಗು ನಿತೀಶ್ ಕುಮಾರ್ ನಡುವಿನ ತೀವ್ರ ಪೈಪೋಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇಂತಹುದೊಂದು ಚರ್ಚೆಗೆ ವೇದಿಕೆಯಾಗಿದ್ದು, ಇಂದು ಆರಂಭಗೊಂಡ 2ದಿನಗಳ ಜೆಡಿ(ಯು) ರಾಷ್ಟ್ರೀಯ ಕಾರ್ಯಕಾರಣಿ ಸಭೆ. ನವದೆಹಲಿಯಲ್ಲಿ ನಡೆಯುತ್ತಿರುವ ಜೆಡಿ(ಯು) ಕಾರ್ಯಕಾರಣಿ ಸಭೆಯ ಹೊರಗಡೆ ಅಂಟಿಸಿದ್ದ ಪೋಸ್ಟರ್‌ವೊಂದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಆ ಪೋಸ್ಟರ್‌ನಲ್ಲಿ ಕುರುಕ್ಷೇತ್ರ ಯುದ್ಧವನ್ನು ಹೋಲುವ ಪಾತ್ರಗಳನ್ನು ಸೃಷ್ಟಿಸಲಾಗಿದೆ.

'2ನೇ ಕುರುಕ್ಷೇತ್ರ 2014' ಎನ್ನುವ ತಲೆಬರಹದ ಅಡಿಯಲ್ಲಿ, ಒಂದೆಡೆ ಸಾರಥಿಯಾಗಿ ಜೆಡಿ(ಯು) ಅಧ್ಯಕ್ಷ ಶರದ್ ಯಾದವ್ ಮತ್ತು ಅರ್ಜುನನಾಗಿ ನಿತೀಶ್ ಕುಮಾರ್ ಅವರು ಯುದ್ಧಕ್ಕೆ ನಿಂತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಸಾರಥಿಯಾಗಿದ್ದರೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ಅರ್ಜುನನಾಗಿ ಬಿಲ್ಲು ಹಿಡಿದು ನಿಂತಿರುವ ಪೋಸ್ಟರ್ ಅನ್ನು ಅಂಟಿಸಲಾಗಿದೆ. ಆದರೆ ಪೋಸ್ಟರ್‌ನಲ್ಲಿ ಬಿಜೆಪಿಯ ಯಾವುದೇ ನಾಯಕರು ಕಾಣಿಸಿಕೊಳ್ಳದೇ ಇರುವುದು ಕುತೂಹಲಕರವೆನಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಮುಂದಿನ 2014ರ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಎನ್ನುವುದನ್ನು ಬಿಜೆಪಿಗೆ ಮನವರಿಕೆ ಮಾಡಲೆಂದೇ ಜೆಡಿ(ಯು) ಈ ಪೋಸ್ಟರ್ ಅಂಟಿಸಿದಂತಿದೆ. ಆದರೆ ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಬಿಜೆಪಿ ಮೂಲಗಳು, ನಿತೀಶ್ ಪ್ರಧಾನಿ ಅಭ್ಯರ್ಥಿಯಾಗುವ ಕುರಿತು ಸ್ಪಷ್ಟನೆ ನೀಡಿವೆ. ಮೋದಿಯೇ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಹೇಳಿದೆ. ಆದರೆ ಗುಜರಾತ್ ಮುಖ್ಯಮಂತ್ರಿ ಪ್ರಧಾನಿ ಅಭ್ಯರ್ಥಿಯಾಗುವುದನ್ನು ವಿರೋಧಿಸುತ್ತಿರುವ ಜೆಡಿ(ಯು), ಮುಂದೆ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement