ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾರ್ಲಿಮೆಂಟ್ ಚುನಾವಣೆ: ಮುಷರಫ್ ಹೊರಗೆ

ಪಾಕಿಸ್ತಾನ ಪಾರ್ಲಿಮೆಂಟ್ ಚುನಾವಣೆಯಿಂದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ಸ್ಫರ್ಧೆಯನ್ನು ಅಲ್ಲಿನ ಉಚ್ಛ ನ್ಯಾಯಾಲಯ ಅನೂರ್ಜಿತಗೊಳಿಸಿದೆ.

Srinivasa Murthy VN
Updated On : 16 Apr 2013, 6:08 am

ಇಸ್ಲಾಮಾಬಾದ್: ಪಾಕಿಸ್ತಾನ ಪಾರ್ಲಿಮೆಂಟ್ ಚುನಾವಣೆಯಿಂದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ಸ್ಫರ್ಧೆಯನ್ನು ಅಲ್ಲಿನ ಉಚ್ಛ ನ್ಯಾಯಾಲಯ ಅನೂರ್ಜಿತಗೊಳಿಸಿದೆ.

ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸು ಹೊತ್ತು ಪಾಕಿಸ್ತಾನಕ್ಕೆ ಮರಳಿದ್ದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರಿಗೆ ಪಾಕಿಸ್ತಾನ ಹೈಕೋರ್ಟ್, ತಡೆಯಲಾಗದ ಶಾಕ್ ನೀಡಿದೆ. 2007ರಲ್ಲಿ ದೇಶದ ಮೇಲೆ ಬಲವಂತವಾಗಿ ತುರ್ತುಪರಿಸ್ಥಿತಿ ಹೇರಿದ ತೀರ್ಮಾನವನ್ನು ದೇಶದ್ರೋಹ ಎಂದು ಪರಿಗಣಿಸಿರುವ ನ್ಯಾಯಾಲಯ, ಅವರನ್ನು ಪಾರ್ಲಿಮೆಂಟ್ ಚುನಾವಣೆಯಿಂದ ಹೊರಹಾಕಿದೆ.

ಪಾಕಿಸ್ತಾನ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಜಧಾನಿ ಇಸ್ಲಾಮಾಬಾದ್, ಕರಾಚಿ, ಕಸೂರ್ ಸೇರಿದಂತೆ ಒಟ್ಟು ನಾಲ್ಕು ಕ್ಷೇತ್ರಗಳಿಂದ ಸ್ಪರ್ಧಿಸಲು ಇಚ್ಛಿಸಿದ್ದ ಮುಷರಫ್ ಅವರ ಆಸೆಗೆ ನ್ಯಾಯಾಲಯ ತಣ್ಣೀರೆರೆಚಿದೆ. ಅಲ್ಲದೆ ಪಾಕಿಸ್ತಾನ ಹೈಕೋರ್ಟ್‌ನ ಆದೇಶ ಹೊರಬೀಳುತ್ತಿದ್ದಂತೆ ಇತ್ತ ಸ್ಥಳೀಯ ಚುನಾವಣಾ ಆಯೋಗ ಮುಷರಫ್ ಅವರ ನಾಮಪತ್ರಗಳನ್ನು ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಚುನಾವಣಾ ಆಯೋಗದ ಕ್ರಮದಿಂದ ಅಸಮಾಧಾನಗೊಂಡಿರುವ ಮುಷರಫ್, ನಾಮಪತ್ರ ತಿರಸ್ಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದೀಗ ಮುಷರಫ್ ಅವರಿಗೆ ಉತ್ತರಿಸಿರುವ ಆಯೋಗ ನ್ಯಾಯಾಲಯದ ಆದೇಶದಂತೆಯೇ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದೆ.

ಒಟ್ಟಾರೆ ತಮ್ಮ ಅಸ್ತಿತ್ವ ಮತ್ತು ಪದವಿಯ ಉಳಿವಿಗಾಗಿ ಸಂವಿಧಾನವನ್ನೇ ಅಮಾನತುಗೊಳಿಸಿ, ಬಲವಂತವಾಗಿ ಪಾಕಿಸ್ತಾನದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದ ಮುಷರಫ್ ಅವರಿಗೆ ಪಾಕ್ ನ್ಯಾಯಾಲಯ ಸರಿಯಾಗಿ ಬುದ್ಧಿಕಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement