ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಧಾನಿ ದಿಕ್ಕು ತಪ್ಪಿಸಲು ಹೇಗೆ ಸಾಧ್ಯ..?: ಕರುಣಾನಿಧಿ

ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ನೀಡಿರುವ ವರದಿಯನ್ನು...

Srinivasa Murthy VN
Updated On : 19 Apr 2013, 5:02 am

ಚೆನ್ನೈ: ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ನೀಡಿರುವ ವರದಿಯನ್ನು ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಪ್ರಶ್ನಿಸಿದ್ದಾರೆ.

ಚೆನ್ನೈನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರುಣಾನಿಧಿ, 'ರಾಜಾ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ದಿಕ್ಕು ತಪ್ಪಿಸಲು ಹೇಗೆ ಸಾಧ್ಯ..? ಇದನ್ನು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಹಗರಣ ಸಂಬಂಧ ಎ.ರಾಜಾ ಅವರಿಗೆ ಏನಾದರೂ ಸಲಹೆ ನೀಡುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎ.ರಾಜಾ ದೂರಸಂಪರ್ಕ ಇಲಾಖೆಯ ಸಚಿವರಾಗಿದ್ದವರು. ಇಲಾಖೆಯ ಆಗು-ಹೋಗುಗಳು ಅವರಿಗೆ ತಿಳಿದಿರುತ್ತದೆ. ಅವರಿಗೆ ತಿಳಿಯದ ಸಲಹೆ ಮತ್ತು ಸೂಚನೆಗಳು ನನ್ನ ಬಳಿ ಇಲ್ಲ ಎಂದು ಭಾವಿಸುತ್ತೇನೆ. ತನಿಖೆ ಪೂರ್ಣಗೊಂಡು ನ್ಯಾಯ ದೊರೆಯುವ ವಿಶ್ವಾಸ ತಮಗಿದೆ' ಎಂದು ಹೇಳಿದ್ದಾರೆ.

2ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ನೀಡಿರುವ ತನ್ನ ವರದಿಯಲ್ಲಿ 'ಹಗರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರವಿಲ್ಲ ಎಂದು ಹೇಳಿದ್ದ ಜೆಪಿಸಿ, ಪ್ರಧಾನಿ ಸಿಂಗ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೆ ಅಂದಿನ ಕೇಂದ್ರ ದೂರಸಂಪರ್ಕ ಇಲಾಖೆ ಸಚಿವ ಎ.ರಾಜಾ ಅವರೇ ಪ್ರಧಾನಿಗಳ ದಿಕ್ಕು ತಪ್ಪಿಸಿದ್ದಾರೆ' ಎಂದು ಸಮಿತಿ ವರದಿ ನೀಡಿತ್ತು.

ಹಗರಣದ ರೂವಾರಿಯಾಗಿರುವ ಮಾಜಿ ಸಚಿವ ಎ.ರಾಜಾ, ಇಂದು ನವದೆಹಲಿಯಿಂದ ಚೆನ್ನೈ ಆಗಮಿಸಲಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಕರುಣಾನಿಧಿ ಅವರು, ಎ.ರಾಜಾ ಪರ ಬ್ಯಾಟಿಂಗ್ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement