ದರ ಏರಿಕೆಯತ್ತ ಮುಖ ಮಾಡಿದ ಚಿನ್ನ
ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಚಿನ್ನದ ದರ ಶನಿವಾರ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನಕ್ಕೆ 27.100 ರು. ಆಗಿದೆ.
ನವದೆಹಲಿ: ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಚಿನ್ನದ ದರ ಶನಿವಾರ ಮತ್ತೆ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನಕ್ಕೆ 27.100 ರು.ಗಳಾಗಿದೆ.
ಇಂದು ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ 250ರು.ಗಳ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದ ಚಿನ್ನ, ಇದೀಗ ಮತ್ತೆ 500ರು.ಗಳ ಏರಿಕೆಯಾಗಿದೆ. ಪ್ರಸ್ತುತ ಚಿನ್ನದ ಪ್ರತಿ 10 ಗ್ರಾಂಗೆ 27.100 ರು.ಗಳಾಗಿದ್ದು, ದರ ಏರಿಕೆಗೆ ಗ್ರಾಹಕರ ಅತಿಯಾದ ಬೇಡಿಕೆಯೇ ಕಾರಣ ಎಂದು ತಿಳಿದು ಬಂದಿದೆ. ಬೆಳ್ಳಿ ದರದಲ್ಲಿ ಮಾತ್ರ ಇಳಿಕೆ ಮುಂದುವರೆದಿದ್ದು, ಪ್ರತಿ ಕೆಜಿ ಬೆಳ್ಳಿ ದರದಲ್ಲಿ 100 ಇಳಿಕೆಯಾಗಿದೆ.
ಸೈಪ್ರಸ್ನಲ್ಲಿ ಉಂಟಾಗಿದ್ದ ಆರ್ಥಿಕ ಹಿಂಜರಿತದಿಂದಾಗಿ ಆ ದೇಶ ತನ್ನ ಬಳಿ ಇದ್ದ ಚಿನ್ನದ ದಾಸ್ತಾನನ್ನು ಮಾರಾಟ ಮಾಡಲು ನಿರ್ಧರಿಸಿದ ಪರಿಣಾಮವಾಗಿ ಹಠಾತ್ ಕುಸಿತಕಂಡಿದ್ದ ಚಿನ್ನದರ, ಇದೀಗ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ನ್ಯೂಯಾರ್ಕ್ನಲ್ಲಿ ಚಿನ್ನದ ದರದಲ್ಲಿ ಶೇ.1.4 ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್ ಚಿನ್ನದ ದರ 1.400 ಡಾಲರ್ಗಳಿಂದ 1.412.4 ಡಾಲರ್ಗೆ ಏರಿಕೆಯಾಗಿದೆ.