ಕಾಮುಕ ರಕ್ಕಸ 14ದಿನ ನ್ಯಾಯಾಂಗ ವಶಕ್ಕೆ
5 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ನೆರೆಮನೆಯ ಮನೋಜ್ ಕುಮಾರ್‌ಗೆ ದೆಹಲಿ ಸೆಷನ್ಸ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ನವದೆಹಲಿ: 5 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ನೆರೆಮನೆಯ ಮನೋಜ್ ಕುಮಾರ್‌ಗೆ ದೆಹಲಿ ಸೆಷನ್ಸ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ದೆಹಲಿಯ ಗಾಂಧಿನಗರದಲ್ಲಿ ವಾಸವಾಗಿದ್ದ ಪುಟ್ಟ ಬಾಲಕಿಯನ್ನು ಕೂಡಿ ಹಾಕಿ ಸತತ 2 ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಿದ್ದ, ಮನೋಜ್‌ಕುಮಾರ್‌ಗೆ ನ್ಯಾಯಾಲಯ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅತ್ಯಾಚಾರವೆಸಗಿ ತನ್ನ ಸ್ವಗ್ರಾಮ ಬಿಹಾರದ ಮುಜಾಫರ್ ಜಿಲ್ಲೆಯ ತನ್ನ ಸ್ವಗ್ರಾಮಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದನು. ನಿನ್ನೆ ಆತನನ್ನು ದೆಹಲಿ ಪೊಲೀಸರು, ಬಿಹಾರ ಪೊಲೀಸರ ಸಹಾಯದಿಂದಾಗಿ ಬಂಧಿಸಿದ್ದರು.
ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಹಿತಿ ಇಲ್ಲ
ಇದೇ ವೇಳೆಯಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಮನೋಜ್ ಕುಮಾರ್‌ನ ಸ್ನೇಹಿತ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ಯಾವುದೇ ಸಾಕ್ಷ್ಯಾಧಾರ ದೊರೆತಿಲ್ಲ ಹೇಳಿದ್ದಾರೆ. ಅಂತೆಯೇ ಮನೋಜ್ ಕುಮಾರ್‌ನನ್ನು ನ್ಯಾಯಾಲಯ ವಶಕ್ಕೆ ನೀಡಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದ ನಂತರ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.