ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೃಷ್ಣ ರಂಗಪ್ರವೇಶ: ಎಂ.ಕೃಷ್ಣಪ್ಪ ಪರ ಪ್ರಚಾರ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಂಗಪ್ರವೇಶ ಮಾಡಿದ್ದು, ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಅವರ ಪರ ಪ್ರಚಾರ ಮಾಡಿದರು.

Srinivasa Murthy VN
Updated On : 21 Apr 2013, 6:18 am

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪ್ರಸಕ್ತ ಚುನಾವಣೆಯಲ್ಲಿ ರಂಗಪ್ರವೇಶ ಮಾಡಿದ್ದು, ಆರಂಭಿಕ ಹಂತವಾಗಿ ವಿಜಯನಗರದ ಹಾಲಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಅವರ ಪರ ಭರ್ಜರಿ ಪ್ರಚಾರ ಮಾಡಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಭಂಡಾಯ ಶಮನವಾಗಿದ್ದು, ಹೈಕಮಾಂಡ್ ನಿರ್ಧಾರದಿಂದ ಬೇಸತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರು ಚುನಾವಣಾ ರಂಗಪ್ರವೇಶ ಮಾಡಿದ್ದಾರೆ. ತಮ್ಮ ಬೆಂಬಲಿಗ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ನಿರಾಕರಣೆ ಮತ್ತು ಸ್ವತಃ ತಮಗೇ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸದೇ ಕಡೆಗಣಿಸಿದ ಪಕ್ಷದ ವರ್ತನೆಗೆ ಬೇಸತ್ತಿದ್ದ ಎಸ್.ಎಂ.ಕೃಷ್ಣ ಪಕ್ಷದಿಂದ ಕಾಲಕ್ರಮೇಣ ದೂರವಾಗಿದ್ದರು ಎಂಬ ಹಲವು ಊಹಾಪೋಹಗಳು ಹರಿದಾಡಿತ್ತು.

ಆದರೆ ಕೇಂದ್ರಸಚಿವ ಎಕೆ ಆಂಟನಿ ಅವರು ನಡೆಸಿದ್ದ, ಸಂಧಾನ ಪ್ರಕ್ರಿಯೆ ಯಶಸ್ವಿಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ನಡೆಸಲು ಕೃಷ್ಣಾ ಅವರು ಒಪ್ಪಿಗೆ ನೀಡಿದ್ದರು.

ಈ ಬಗ್ಗೆ ನಿನ್ನೆ ಸ್ಪಷ್ಟನೆ ನೀಡಿದ್ದ ಕೃಷ್ಣ ಅವರು, ತಾವು ಕಾಂಗ್ರೆಸ್ ಪಕ್ಷದಿಂದ ದೂರವಾಗಿಲ್ಲ, ಪಕ್ಷ ಎಂದಿಗೂ ತಮ್ಮನ್ನು ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ಭಾನುವಾರದಿಂದ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ತಿಳಿಸಿದ್ದರು. ಅಂತೆಯೇ ಇಂದು ವಿಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಪರ ಕೃಷ್ಣಾ ಅವರು ಪ್ರಚಾರ ನಡೆಸಿದರು. ಇಂದು ಸಂಜೆ ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಪ್ರಿಯಕೃಷ್ಣ ಅವರ ಪರ ಎಸ್.ಎಂ.ಕೃಷ್ಣಾ ಅವರು ಪ್ರಚಾರ ನಡೆಸಲಿದ್ದಾರೆ.

ಶಿವಾಜಿನಗರದಲ್ಲಿ ರಮ್ಯಾ ಪ್ರಚಾರ
ಹಲವು ದಿನಗಳಿಂದ ಪಕ್ಷದಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದ ನಟಿ ರಮ್ಯಾ ಅವರು, ಇಂದು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಕಾರ್ಯಕರ್ತರಲ್ಲಿ ರೋಮಾಂಚನ ಉಂಟುಮಾಡಿದರು. ತೆರೆದ ವಾಹನದಲ್ಲಿ ನಟಿ ರಮ್ಯಾ ಅವರು ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement