"ಮಾನವ ಗಣಕಯಂತ್ರ" ಶಂಕುತಲಾ ದೇವಿ ನಿಧನ
ಮಾನವ ಗಣಕಯಂತ್ರವೆಂದೇ ಖ್ಯಾತರಾಗಿದ್ದ ಶಕುಂತಾಲಾದೇವಿ ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಂಗಳೂರು: ಖ್ಯಾತ ಗಣಿತ ತಜ್ಞೆ ಮತ್ತು ಮಾನವ ಗಣಕಯಂತ್ರವೆಂದೇ ಖ್ಯಾತರಾಗಿದ್ದ ಶಕುಂತಾಲಾದೇವಿ ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಮಧ್ಯಾಹ್ನ ಬಸವನಗುಡಿಯ ಅವರ ನಿವಾಸದಲ್ಲಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತೀವ್ರ ಹೃದಯಾಘಾತಕ್ಕೀಡಾದ ಶಂಕುತಾಲಾ ದೇವಿ ಅವರು ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 1939 ನವೆಂಬರ್ 4ರಂದು ಜನಿಸಿದ ಶಕುಂತಲಾ ಅವರು ತಮ್ಮ ಆರನೇ ವಯಸ್ಸಿನಲ್ಲಿಯೇ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಂಕಗಣಿತ ಮತ್ತು ಬೀಜಗಣಿತದ ಕ್ಲಿಷ್ಟ ಲೆಕ್ಕಗಳನ್ನು ಬಗೆಹರಿಸಿದ್ದರು.
1977ರಲ್ಲಿ ಶಕುಂತಲಾ ಅವರು 201 ಅಂಕಿಗಳ 23ನೇ ವರ್ಗಮೂಲವನ್ನು ಕೇವಲ 50 ಸೆಕಂಡುಗಳಲ್ಲಿ ಲೆಕ್ಕಹಾಕಿ ಹೇಳಿದರು. ಇದೇ ಲೆಕ್ಕವನ್ನು ಯುನಿವ್ಯಾಕ್ 1108 ಕಂಪ್ಯೂಟರ್ ಒಂದು ನಿಮಿಷಕ್ಕೂ ಅಧಿಕ ಸಮಯ ತೆಗೆದುಕೊಂಡಿತು. ಆ ಮೂಲಕ ಶಕುಂತಲಾದೇವಿ ಅವರು ಮಾನವಗಣಕ ಯಂತ್ರ ಎಂಬ ಖ್ಯಾತಿಗೆ ಒಳಗಾದರು. ಹಲವು ಹೆಸರಾಂತ ಪುಸ್ತಕಗಳನ್ನು ಬರೆದಿರುವ ಅವರು, Puzzles to Puzzle You, Awaken the Genius in Your Child, Book of Numbers, In the Wonderland of Numbers, Perfect Murder and Astrology for You ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ.
ಶಕುಂತಲಾದೇವಿ ಅವರ ಪಾರ್ಥೀವ ಶರೀರದ ಅಂತಿಮ ಕ್ರಿಯೆಯನ್ನು ನಾಳೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.