ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಾವಿರ ಬಾರಿ ರಾಜಿನಾಮೆ ಕೊಡಲು ಸಿದ್ಧ: ನೀರಜ್ ಕುಮಾರ್

ಅತ್ಯಾಚಾರ ಪ್ರಕರಣಗಳು ನಿಲ್ಲುವುದಾದರೆ ಒಂದು ಬಾರಿಯಲ್ಲ ಸಾವಿರ ಬಾರಿ ರಾಜಿನಾಮೆ ಕೊಡಲು ಸಿದ್ಧ ಎಂದು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದರು.

Srinivasa Murthy VN
Updated On : 22 Apr 2013, 5:41 am

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ನಿಲ್ಲುವುದಾದರೆ ಒಂದು ಬಾರಿಯಲ್ಲ ಸಾವಿರ ಬಾರಿ ನನ್ನ ಸ್ಥಾನಕ್ಕೆ ರಾಜಿನಾಮೆ ಕೊಡಲು ಸಿದ್ಧ ಎಂದು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದರು.

ಇಂದು ದೆಹಲಿ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಮಾತನಾಡಿದ ನೀರಜ್ ಕುಮಾರ್ ಅವರು, ನನ್ನ ರಾಜಿನಾಮೆಯಿಂದಾಗಿ ಅತ್ಯಾಚಾರದಂತಹ ಹೀನ ಕೃತ್ಯಗಳು ನಿಲ್ಲುವುದಾದರೆ ತಾವು ತಮ್ಮ ಸ್ಥಾನಕ್ಕೆ ಒಂದು ಬಾರಿಯಲ್ಲ ಸಾವಿರ ಬಾರಿ ರಾಜಿನಾಮೆ ಕೊಡುತ್ತೇನೆ. ಸ್ವಲ್ಪ ನೀವೇ ಯೋಚಿಸಿ, ಅತ್ಯಾಚಾರಗಳು ಎಲ್ಲರಿಗೂ ತಿಳಿಯುವಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತವೆಯೇ? ಇಂತಹ ಪ್ರಕರಣಗಳಲ್ಲಿ ಶೇ.97ರಷ್ಟು ಪ್ರಕರಣಗಳಲ್ಲಿ ಕುಟುಂಬಸ್ಥರು ಅಥವಾ ನೆರಮನೆಯವರು, ತಿಳಿದವರೇ ಭಾಗಿಯಾಗಿರುತ್ತಾರೆ. ಕೇವಲ ಶೇ.3 ರಷ್ಟು ಜನ ಮಾತ್ರ ಅಪರಿಚಿತರಾಗಿರುತ್ತಾರೆ ಎಂದು ಹೇಳಿದರು.

ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಕುರಿತು ಆರೋಪಗಳು ಕೇಳಿಬರುತ್ತಿದ್ದು, ನೈತಿಕ ಹೊಣೆಹೊತ್ತು ನೀವು ರಾಜಿನಾಮೆ ನೀಡುವಿರಾ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, 'ಬಹುತೇಕ ಅತ್ಯಾಚಾರ ಪ್ರಕರಣಗಳು ಮನೆಗಳಲ್ಲಿಯೇ ನಡೆಯುತ್ತವೆ. ಎಲ್ಲ ಮನೆಗಳಿಗೂ ರಕ್ಷಣೆ ನೀಡಲು ಸಾಧ್ಯವೇ? ನಿಮ್ಮಲ್ಲಿಯೂ ಸಹ ಅನೇಕ ಬಾರಿ ವರದಿಗಾರರು ತಪ್ಪು ಮಾಡುತ್ತಾರೆ. ಅದಕ್ಕಾಗಿ ನಿಮ್ಮ ಸಂಪಾದಕರು ರಾಜಿನಾಮೆ ಕೊಡುತ್ತಾರೆಯೇ ಎಂದು ಪತ್ರಕರ್ತರನ್ನೇ ಪುನರ್‌ಪ್ರಶ್ನಿಸಿದರು.

5 ವರ್ಷದ ಪುಟ್ಟ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದಾಗಿ ದೆಹಲಿ ಪೊಲೀಸ್ ಆಯುಕ್ತ ಸ್ಥಾನಕ್ಕೆ ಸಂಚಕಾರ ಬಂದೊದಗಿದೆ. ವಿಪಕ್ಷಗಳು ಸೇರಿದಂತೆ ಆಡಳಿತ ಪಕ್ಷದ ಕೆಲ ಸದಸ್ಯರು ಪೊಲೀಸ್ ಆಯುಕ್ತರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಂತೆಯೇ ಪ್ರತಿಭಟನಾ ನಿರತ ಯುವತಿಯ ಕಪಾಳಕ್ಕೆ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಹೊಡೆದ ಪ್ರಕರಣವನ್ನು ಗಂಭೀರವಾಗಿ ಪರಗಣಿಸಿರುವ ಪ್ರತಿಭಟನಾಕಾರರು ಪೊಲೀಸರ ಮತ್ತು ಆಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದು, ಇವೆಲ್ಲವುಗಳಿಂದ ಬೇಸತ್ತಿದ್ದ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರು, ಇಂದು ತಮ್ಮ ಮೌನವನ್ನು ಮುರಿದು ತಮ್ಮ ಮನದಾಳದ ಅಸಮಾಧಾನವನ್ನು ಈ ಮೂಲಕ ಹೊರಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement