ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಡಿ ಅತಿಕ್ರಮಣ; ಸಮಾಲೋಚನೆ ಮೂಲಕ ಪರಿಹಾರ: ಆಂಟನಿ

ಗಡಿ ಅತಿಕ್ರಮಣ:ಉಭಯ ದೇಶಗಳ ನಡುವಿನ ಸಮಾಲೋಚನೆ ಪ್ರಗತಿಯಲ್ಲಿದ್ದು, ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ವಿಶ್ವಾಸವಿದೆ ಎಂದು ಎಕೆ ಆಂಟನಿ ಹೇಳಿದ್ದಾರೆ.

Srinivasa Murthy VN
Updated On : 24 Apr 2013, 3:17 am

ಬೆಂಗಳೂರು: ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಸಮಾಲೋಚನೆ ಪ್ರಗತಿಯಲ್ಲಿದ್ದು, ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ವಿಶ್ವಾಸವಿದೆ ಎಂದು ರಕ್ಷಣಾ ಸಚಿವ ಎಕೆ ಆಂಟನಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಆಂಟನಿ, 'ಭಾರತದ ಸಾರ್ವಭೌಮತ್ವಕ್ಕೆ ಮತ್ತು ಭಾರತದ ಪ್ರಜೆಗಳ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಿದ್ದು, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಸ್ತುತ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಚೀನಾ ಮತ್ತು ಭಾರತ ದೇಶಗಳು ವಿವಿಧ ಹಂತಗಳಲ್ಲಿ ಸಮಾಲೋಚನೆಯಲ್ಲಿ ತೊಡಗಿವೆ'.

'ಮಂಗಳವಾರ ಉಭಯ ದೇಶಗಳ ಸೇನಾ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ' ಎಂದು ಆಂಟನಿ ತಿಳಿಸಿದರು. ಆದರೆ ಮೂಲಗಳ ಪ್ರಕಾರ ಮಂಗಳವಾರ ನಡೆದ ಬ್ರಿಗೇಡಿಯರ್ಸ್ ಮಟ್ಟದ 2ನೇ ಧ್ವಜಸಭೆಯೂ ಮುರಿದು ಬಿದ್ದಿದ್ದು, ಸಭೆಯಲ್ಲಿ ಚೀನಾ ತನ್ನ ಯೋಧರ ಗಡಿ ಅತಿಕ್ರಮಣ ಆರೋಪವನ್ನು ತಿರಸ್ಕರಿಸಿದೆ. ಆಲ್ಲದೆ ತನ್ನ ಗಡಿಯಲ್ಲಿಯೇ ಯೋಧರು ಡೇರೆಗಳನ್ನು ನಿರ್ಮಿಸಿಕೊಂಡು ಕಾವಲು ಕಾಯುತ್ತಿದ್ದಾರೆ ಎಂದು ವಾದಿಸಿದೆ.

ಭಾರತ ಗಡಿ ಪ್ರದೇಶವಾದ ಲಡಾಕ್‌ನ ದೌಲತ್ ಬೇಗ್ ಓಲ್ಡಿ ಸೆಕ್ಟರ್(ಡಿಬಿಒ) ನಲ್ಲಿರುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯ 10 ಕಿ.ಮೀ ವ್ಯಾಪ್ತಿಯಲ್ಲಿ ಚೀನಾ ಯೋಧರು ಗಡಿ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ನುಸುಳಿರುವುದು ಕಂಡು ಬಂದಿದೆ. ಇದು ಉಭಯ ದೇಶಗಳ ನಡುವಿನ ಭಾಂದವ್ಯಕ್ಕೆ ಇದು ಧಕ್ಕೆಯಾಗಿದೆ. ಚೀನಾದ ಯೋಧರ ವರ್ತನೆಯನ್ನು ಖಂಡಿಸಿರುವ ಭಾರತ, ಗಡಿ ನಿಯಂತ್ರಣ ಕಾಯ್ದೆಯನ್ನು ಪಾಲಿಸುವಂತೆ ಚೀನಾವನ್ನು ಕೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement