ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಂಗ್ಲಾ ಕಟ್ಟಡ ಕುಸಿತ: ಸಾವಿನ ಸಂಖ್ಯೆ 228ಕ್ಕೇರಿಕೆ

ಬಾಂಗ್ಲಾದೇಶದಲ್ಲಿ ಬುಧವಾರ ಸಂಭವಿಸಿದ್ದ ಕಟ್ಟಡ ದುರಂತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 228ಕ್ಕೇರಿದ್ದು, ಗಾಯಾಳುಗಳ ಸಂಖ್ಯೆ ಒಂದು ಸಾವಿರ ಮೀರಿದೆ.

Srinivasa Murthy VN
Updated On : 25 Apr 2013, 8:01 am

ಢಾಕಾ: ಬಾಂಗ್ಲಾದೇಶದಲ್ಲಿ ಬುಧವಾರ ಸಂಭವಿಸಿದ್ದ ಕಟ್ಟಡ ದುರಂತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 228ಕ್ಕೇರಿದ್ದು, ಗಾಯಾಳುಗಳ ಸಂಖ್ಯೆ ಒಂದು ಸಾವಿರ ಮೀರಿದೆ.

ಕಳೆದ ಬುಧವಾರ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಕಟ್ಟಡದ ಅವಶೇಷಗಳಡಿಯಲ್ಲಿ ಮತ್ತಷ್ಟು ಜನರು ಸಿಲುಕಿದ್ದಾರೆ. ಇದುವರೆವಿಗೂ ಸುಮಾರು 228 ಮೃತ ದೇಹಗಳು ದೊರೆತಿವೆ. 8 ಮಹಡಿಗಳ ಕಟ್ಟಡದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿ ಕಾರ್ಯ ನಿರ್ವಹಿಸುತ್ತಿತ್ತು. ದುರಂತ ನಡೆದ ಸಂದರ್ಭದಲ್ಲಿ  ಗಾರ್ಮೆಂಟ್ಸ್‌ನಲ್ಲಿ ಸುಮಾರು 3000 ಸಾವಿರ ನೌಕರರು ಕೆಲಸದಲ್ಲಿ ತೊಡಗಿದ್ದರು ಎಂದು ಮೂಲಗಳು ತಿಳಿಸಿವೆ.

ಕಟ್ಟಡ ಕುಸಿಯಲು ನಿರ್ದಿಷ್ಟ ಕಾರಣ ಇದುವರೆವಿಗೂ ಪತ್ತೆಯಾಗಿಲ್ಲ. ದುರಂತಕ್ಕೀಡಾದ ರಾಣಾ ಪ್ಲಾಜಾ ಸ್ಥಳೀಯ ಪ್ರಭಾವಿ ರಾಜಕಾರಣಿ ಮಹಮದ್ ಸೊಹೇಲ್ ರಾಣಾ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಸ್ಥಳೀಯ ಕಾರ್ಪೋರೇಷನ್ ಇವರಿಗೆ 5 ಅಂತಸ್ತುಗಳನ್ನು ಮಾತ್ರ ನಿರ್ಮಿಸಲು ಪರವಾನಗಿ ನೀಡಿತ್ತು. ಆದರೆ ಇವರು ತಮ್ಮ ಪ್ರಭಾವ ಬಳಸಿ ಅನಧಿಕೃತವಾಗಿ 8 ಅಂತಸ್ತುಗಳನ್ನು ನಿರ್ಮಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೊಹೇಲ್ ರಾಣಾ ಅವರ ಮೇಲೆ ನಿರ್ಲಕ್ಷ್ಯ ಮತ್ತು ಅಕ್ರಮ ಕಾಮಗಾರಿಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ಐದು ತಿಂಗಳ ಹಿಂದಷ್ಟೇ ಅಂದರೆ ಕಳೆದ ನವೆಂಬರ್‌ನಲ್ಲಿ ಬಟ್ಟೆ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 117 ಮಂದಿ ಸಾವಿಗೀಡಾಗಿದ್ದರು. ಬೆಂಕಿಯ ತೀವ್ರತೆಗೆ ಕಟ್ಟದ ಗೋಡೆಗಳು ಬಿರುಕು ಬಿಟ್ಟು, ಕುಸಿಯುವ ಹಂತಕ್ಕೆ ತಲುಪಿತ್ತು. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ಘೋರ ದುರಂತ ತಪ್ಪಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement