ಚೆನ್ನಿಗಪ್ಪ ಕಾರ್ ಜಪ್ತಿ: 20 ಲಕ್ಷ ವಶ
ಜೆಡಿಎಸ್ ಮುಖಂಡ ಚೆನ್ನಿಗಪ್ಪ ಅವರಿಗೆ ಸೇರಿದ ಕಾರನ್ನು ಯಲಹಂಕ ಪೊಲೀಸರು ಜಪ್ತಿ ಮಾಡಿದ್ದು, ಕಾರಿನಲ್ಲಿದ್ದ ಇಪ್ಪತ್ತು ಲಕ್ಷ..
ಬೆಂಗಳೂರು: ಜೆಡಿಎಸ್ ಮುಖಂಡ ಚೆನ್ನಿಗಪ್ಪ ಅವರಿಗೆ ಸೇರಿದ ಕಾರನ್ನು ಯಲಹಂಕ ಪೊಲೀಸರು ಜಪ್ತಿ ಮಾಡಿದ್ದು, ಕಾರಿನಲ್ಲಿದ್ದ ಇಪ್ಪತ್ತು ಲಕ್ಷ ರುಪಾಯಿಗಳೊಂದಿಗೆ ಇಬ್ಬರನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ತೆರಳುತಿದ್ದ ಕಾರಿನಲ್ಲಿ ಸುಮಾರು 20 ಲಕ್ಷ ರುಪಾಯಿಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ಇಂದು ಮಧ್ಯಾಹ್ನ ಆಲ್ಲಾಳಸಂದ್ರದ ಬಳಿ ಕಾರನ್ನು ತಡೆದು ತಪಾಸಣೆ ನಡೆಸಿದರು. ಕಾರಿನಲ್ಲಿದ್ದ 20 ಲಕ್ಷ ರುಪಾಯಿಗಳನ್ನು ಜಪ್ತಿ ಮಾಡಿರುವ ಪೊಲೀಸರು, ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ವ್ಯಕ್ತಿಗಳ ಪೈಕಿ ಕಾರು ಚಾಲಕ ರಾಹುಲ್ ಎಂಬಾತ, ಕಾರು ಚೆನ್ನಿಗಪ್ಪ ಅವರಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದಾನೆ. ಆದರೆ ವಾಹನದಲ್ಲಿದ್ದ ಹಣ ಯಾರದ್ದು ಎಂಬ ವಿಚಾರ ಬಹಿರಂಗಗೊಂಡಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.