ಖೇಣಿ ಪರ ಸುದೀಪ್ ಭರ್ಜರಿ ಪ್ರಚಾರ
ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಶೋಕ್ ಖೇಣಿ ಪರ ನಟ ಸುದೀಪ್ ಇಂದು ಭರ್ಜರಿ ಪ್ರಚಾರ ನಡೆಸಿದರು.
ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿರುವ ಅಶೋಕ್ ಖೇಣಿ ಅವರಿಗೆ ಮತ ನೀಡುವಂತೆ ನಟ ಸುದೀಪ್ ಮತದಾರರನ್ನು ಕೇಳಿದರು. ಸುದೀಪ್ ಆಗಮನದಿಂದ ಬೀದರ್ ಜನ ಪುಳಕಿತರಾಗಿದ್ದರು. ನೂರಾರು ಜನರು ಸುದೀಪ್ ಅವರ ತೆರೆದ ವಾಹನವನ್ನು ಹಿಂಬಾಲಿಸಿ, ಅವರನ್ನು ಹುರಿದುಂಬಿಸಿದರು.
ಸುಮಾರು 4 ಗಂಟೆಗಳ ಪ್ರಚಾರ ನಡೆಸಿದ ನಟ ಸುದೀಪ್ ಪ್ರಚಾರದಲ್ಲಿ ಅಶೋಕ್ ಖೇಣಿ ಅವರ ಅಭಿವೃದ್ದಿ ಕನಸಿನ ಕುರಿತು ಮಾತನಾಡಿದರು.