ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚೀನಾ ಪ್ರವಾಸ ರದ್ದುಗೊಳಿಸಿ: ರಾಜನಾಥ್ ಸಿಂಗ್

ವಿದೇಶಾಂಗ ಸಚಿವರು ಚೀನಾ ಪ್ರವಾಸವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.

Srinivasa Murthy VN
Updated On : 28 Apr 2013, 5:37 am

ನವದೆಹಲಿ: ವಿದೇಶಾಂಗ ಸಚಿವರು ಚೀನಾ ಪ್ರವಾಸವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಖಾಸಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಚೀನಾ ಮತ್ತು ಭಾರತ ದೇಶಗಳ ನಡುವಿನ ಬಿಕ್ಕಟ್ಟು ತಾರಕ್ಕೇರಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಹೀಗಾಗಿ ಮೇ 9ರಂದು ವಿದೇಶಾಂಗ ಸಚಿವರು ಹಮ್ಮಿಕೊಂಡಿರುವ ಚೀನಾ ಪ್ರವಾಸವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

'ಚೀನಾ ಯೋಧರ ಗಡಿ ಅತಿಕ್ರಮಣ ಬಿಕ್ಕಟ್ಟು ತಾರಕ್ಕೇರಿದೆ. ನಮ್ಮ ಗಡಿಯನ್ನು ಅವರು ಅತಿಕ್ರಮಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಿದೇಶಾಂಗ ಸಚಿವರು ಚೀನಾ ಪ್ರವಾಸ ಕೈಗೊಂಡಿರುವುದು ನನಗೆ ಸರಿಕಾಣುತ್ತಿಲ್ಲ. ಹೀಗಾಗಿ ಪ್ರಧಾನಿಗಳ ಬಳಿ ನಾನು ಮನವಿ ಮಾಡುತ್ತಿದ್ದೇನೆ. ದಯವಿಟ್ಟು ವಿದೇಶಾಂಗ ಸಚಿವರ ಪ್ರವಾಸವನ್ನು ಬಿಕ್ಕಟ್ಟು ಪರಿಹಾರವಾಗುವವರೆಗೂ ತಡೆಯಿರಿ. ಅತಿಕ್ರಮಣವಾಗಿರುವ ಭಾರತದ ಗಡಿ ಭಾಗವನ್ನು ಚೀನಾ ನಮಗೆ ಬಿಟ್ಟುಕೊಡಬೇಕು'.

'2010ರವರೆಗೂ ಆ ಪ್ರದೇಶ ಭಾರತೀಯ ಯೋಧರ ವಶದಲ್ಲಿತ್ತು. ಕೇಂದ್ರಸರ್ಕಾರ ಯೋಧರನ್ನು ವಾಪಸ್ ಕರೆಸಿಕೊಂಡಿತ್ತು. ಇಂದು ಚೀನಾ ಯೋಧರು ಆ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಇದು ಖಂಡಿತಾ ಗೃಹ ಇಲಾಖೆಯ ವೈಫಲ್ಯವಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಯಾವುದೇ ರೀತಿ ವಿಳಂಬ ಮಾಡದೇ ಆ ಪ್ರದೇಶವನ್ನು ಐಟಿಬಿಪಿ ಯೋಧರಿಗೆ ಒಪ್ಪಿಸಬೇಕು'.

'ಏಕೆಂದರೆ ಅದು ತುಂಬಾ ಸೂಕ್ಷ್ಮ ಪ್ರದೇಶವಾಗಿದ್ದು, ಅಲ್ಲಿ ಬೇರಾವುದೇ ವಿಭಾಗದ ಯೋಧರು ಕರ್ತವ್ಯ ನಿರ್ವಹಿಸಲಾರರು. ಐಟಿಬಿಪಿ ಯೋಧರು ಮಾತ್ರವೇ ಅಲ್ಲಿ ಕಾರ್ಯನಿರ್ವಹಿಸಬಲ್ಲರು. ದೇಶ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ. ಗಡಿಯ ಹೊರಗೆ ಶತ್ರುಗಳು ಅವಕಾಶಕ್ಕಾಗಿ ಕಾದುಕುಳಿತಿದ್ದಾರೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು' ಎಂದು ರಾಜನಾಥ್ ಸಿಂಗ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement