ಪೆಟ್ರೋಲ್ ದರ 2ರು. ಇಳಿಕೆ ಸಾಧ್ಯತೆ
ಪೆಟ್ರೋಲ್ ದರದಲ್ಲಿ 2 ರುಪಾಯಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಪೆಟ್ರೋಲ್ ದರದಲ್ಲಿ 2 ರುಪಾಯಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರದಲ್ಲಿ ಇಳಿಕೆಯಾಗಿದೆ. ಅಂತೆಯೇ ಷೇರು ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕೂಡ ಏರಿಕೆಯಾಗಿದೆ. ಹೀಗಾಗಿ ಪೆಟ್ರೋಲ್ ದರವನ್ನು 2 ರುಪಾಯಿ ಇಳಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿವೆ. ಆದರೆ ಡೀಸೆಲ್ ದರ ಮಾತ್ರ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ನಾಳೆ ನವದೆಹಲಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ವೀರಪ್ಪ ಮೋಯ್ಲಿ ಅವರ ನೇತೃತ್ವದಲ್ಲಿ ತೈಲ ಕಂಪೆನಿಗಳ ಸಭೆ ನಡೆಯಲಿದ್ದು, ಸಭೆಯ ಬಳಿಕ ದರ ಇಳಿಕೆ ಕುರಿತು ಮಾಹಿತಿ ಹೊರಬೀಳಲಿದೆ. ನೂತನ ದರ ನಾಳೆ ಮಧ್ಯರಾತ್ರಿಯಿಂದಲೇ ಜಾರಿಯಾಗುವ ಸಾಧ್ಯತೆ ಇದೆ.