ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶಾಂತಿನಗರದಲ್ಲಿ ರಮ್ಯಾ ಪ್ರಚಾರ: ತಮಿಳು ಭಾಷಣಕ್ಕೆ ತೀವ್ರ ವಿರೋಧ

ಶಾಂತಿನಗರದಲ್ಲಿ ನಟಿ ರಮ್ಯಾ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು.

Srinivasa Murthy VN
Updated On : 1 May 2013, 5:12 am

ಬೆಂಗಳೂರು: ಶಾಂತಿನಗರದಲ್ಲಿ ನಟಿ ರಮ್ಯಾ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು.

ಶಾಂತಿನಗರದ ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಅವರ ಪರ ರಮ್ಯಾ ಅವರು ಪ್ರಚಾರ ಮಾಡಿದರು. ಶಾಸಕ ಹ್ಯಾರಿಸ್ ಅವರ ಮನವಿಯ ಮೇರೆಗೆ ತಮಿಳಿನಲ್ಲಿ ಭಾಷಣ ಮಾಡಿದ ರಮ್ಯಾ ಅವರು, ತಮಿಳಿನಲ್ಲಿಯೇ ಮತಯಾಚನೆ ಮಾಡಿದರು. ರಮ್ಯಾ ಅವರ ತಮಿಳು ಭಾಷಣಕ್ಕೆ ತೀವ್ರ ವಿರೋಧ್ಯ ವ್ಯಕ್ತವಾಗುತ್ತಿದ್ದು, ರಮ್ಯಾ ಅವರು ಕರ್ನಾಟಕ ಜನತೆಯ ಕ್ಷಮೆಯಾಚಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, 'ಕರ್ನಾಟಕದಲ್ಲಿ ಕನ್ನಡ ಮಾತನಾಡದೇ ತಮಿಳಿನಲ್ಲಿ ಮಾತನಾಡಿದ ನಟಿ ರಮ್ಯಾ ಅವರು ಈ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲವಾದರೆ ರಾಜ್ಯದಲ್ಲಿ ಅವರ ಯಾವುದೇ ಚಿತ್ರಗಳು ತೆರೆ ಕಾಣಲು ಬಿಡುವುದಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ತಮಿಳು ಮತದಾರರ ಮನಸೆಳೆಯಲು ತಮಿಳಿನಲ್ಲಿ ಭಾಷಣ ಮಾಡಿದ ರಮ್ಯಾ ಅವರ ತಂತ್ರ, ಅವರಿಗೇ ತಿರುಗುಬಾಣವಾಗಿ ಮಾರ್ಪಟ್ಟಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ನಟಿ ರಮ್ಯಾ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement