ವಿಶ್ವ ಬ್ಯಾಡ್ಮಿಂಟನ್: ಸೈನಾ, ಕಶ್ಯಪ್ಗೆ ಸೋಲು
ಗ್ಯಾಂಗ್ಜೌ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪಿ.ಕಶ್ಯಪ್ ಸೋಲು ಅನುಭವಿಸಿದ್ದಾರೆ.
ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿಯ ಭರವಸೆ ಮೂಡಿಸಿದ್ದ ಸೈನಾ ನೆಹ್ವಾಲ್ ಅವರು ಇಂದು ನಡೆದ ಮಹಿಳೆಯರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಯೋನ್ ಜು ಬೇ ಅವರ ವಿರುದ್ಧ 23-21, 21-9 ಅಂತರದ ನೇರ ಸೆಟ್ಗಳಿಂದ ಸೋಲನುಭವಿಸಿದ್ದಾರೆ. ಅಂತೆಯೇ ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪಿ.ಕಶ್ಯಪ್ ಅವರು ಚೀನಾದ ಡು ಪೆಂಗ್ಯೂ ಅವರ ವಿರುದ್ಧ 21-16, 22-20, 21-15 ಸೆಟ್ಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಿಂದ ಸೈನಾ ಮತ್ತು ಕಶ್ಯಪ್ ಹೊರಬಿದ್ದಿದ್ದು, ಪ್ರಶಸ್ತಿ ಗೆಲ್ಲುವ ಭಾರತದ ಆಸೆ ಕಮರಿದೆ.