ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತಿರುಪತಿಯನ್ನು ತ.ನಾಡಿಗೆ ಸೇರಿಸಿ: ರಾಮದಾಸ್

ತಿರುಪತಿಯನ್ನು ತಮಿಳುನಾಡಿಗೆ ಸೇರಿಸಿ ಎಂದು ಪಿಎಂಕೆ ಪಕ್ಷದ ಸಂಸ್ಥಾಪಕ ಎಸ್ ರಾಮದಾಸ್ ಹೇಳಿದ್ದಾರೆ.

Srinivasa Murthy VN
Updated On : 10 Aug 2013, 6:18 am

ಚೆನ್ನೈ: ತಿರುಪತಿಯನ್ನು ತಮಿಳುನಾಡಿಗೆ ಸೇರಿಸಿ ಎಂದು ಪಿಎಂಕೆ ಪಕ್ಷದ ಸಂಸ್ಥಾಪಕ ಎಸ್ ರಾಮದಾಸ್ ಹೇಳಿದ್ದಾರೆ.

ಚೆನ್ನೈನಲ್ಲಿ ರಾಮದಾಸ್ ಅವರ ಹೇಳಿಕೆಯನ್ನು ಪಕ್ಷದ ವಕ್ತಾರರು ಬಿಡುಗಡೆ ಮಾಡಿದ್ದು, ರಾಮದಾಸ್ ಅವರು ತಮ್ಮ ಹೇಳಿಕೆಯಲ್ಲಿ '1956 ಭಾಷಾಧಾರಿತ ರಾಜ್ಯಗಳ ವರ್ಗೀಕರಣದ ಆಧಾರದ ಮೇಲೆ ತಮಿಳು ಭಾಷೆಯನ್ನು ಹೆಚ್ಚಾಗಿ ಮಾತಾನಾಡುವ ಪ್ರದೇಶಗಳನ್ನು ತಮಿಳುನಾಡಿಗೆ ಸೇರಿಸಬೇಕು. ಅದರಂತೆ ತಿರುಪತಿ, ತಿರುಕಾಳಾಹಸ್ತಿ, ಚಿತ್ತೂರು, ಪುತ್ತೂರು ಮತ್ತು ಸತ್ಯವೇಡು ಜಿಲ್ಲೆಗಳು ಸೇರಿದಂತೆ ಒಟ್ಟು 8 ಜಿಲ್ಲೆಗಳನ್ನು ತಮಿಳುನಾಡಿಗೆ ಸೇರಿಸಬೇಕು' ಎಂದು ಹೇಳಿದ್ದಾರೆ.

ಅಲ್ಲದೆ ಈ ಬೇಡಿಕೆಯ ಕುರಿತು 'ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ವೈಷಮ್ಯಗಳನ್ನು ಮರೆತು ಒಗ್ಗಟ್ಟಾಗಿ ಹೋರಾಡಬೇಕು. ಈ ಕುರಿತು ವಿಶೇಷ ಅಧಿವೇಶನ ಕರೆದು ನಿಲುವಳಿ ಮಂಡಿಸುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಹೆಚ್ಚಿನ ಸಂಖ್ಯೆಯಲ್ಲಿನ ತಮಿಳು ಭಾಷಿಕರು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಂಚಿಹೋಗಿದ್ದು, ಅವರನ್ನು ಮತ್ತೆ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳವ ಅವಶ್ಯಕತೆ ಇದೆ' ಎಂದು ರಾಮದಾಸ್ ಹೇಳಿದ್ದಾರೆ.

'200ಕ್ಕೂ ಹೆಚ್ಚು ತಮಿಳು ಭಾಷಿಕರು ವಾಸಿಸುತ್ತಿರುವ ಹಳ್ಳಿಗಳು ಆಂಧ್ರಪ್ರದೇಶಕ್ಕೆ ಹಂಚಿಹೋಗಿದ್ದು, ತೆಲಂಗಾಣ ನೂತನ ರಾಜ್ಯ ರಚನೆಯಿಂದಾಗಿ ನಮ್ಮ ರಾಜ್ಯವನ್ನು ಪುನರ್ ವಿಂಗಡಣೆ ಮಾಡುವ ಅವಕಾಶ ಒದಗಿ ಬಂದಿದೆ' ಎಂದು ರಾಮದಾಸ್ ಹೇಳಿದ್ದಾರೆ.

ಒಟ್ಟಾರೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಚಾರ ಆಂಧ್ರ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದರೆ, ಇತ್ತ ಪಿಎಂಕೆ ಪಕ್ಷದ ಅಧ್ಯಕ್ಷ ರಾಮದಾಸ್ ಅವರು ತಿರುಪತಿಯನ್ನು ತಮಿಳುನಾಡಿಗೆ ಸೇರಿಸಿಕೊಳ್ಳುವ ವಿವಾದಕ್ಕೆ ಮತ್ತೆ ಜೀವ ತುಂಬಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement