ಜೋಗದಲ್ಲಿ ಕಾಲು ಜಾರಿ ಮೂವರ ಜಲಸಮಾಧಿ
ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಕಾಲು ಜಾರಿ ಹುಬ್ಬಳ್ಳಿಯ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಕಾಲು ಜಾರಿ ಹುಬ್ಬಳ್ಳಿಯ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಜೋಗ ಜಲಪಾತ ವೀಕ್ಷಿಸಲು ಆಗಮಿಸಿದ್ದ ಮೂವರು ಪ್ರವಾಸಿಗರು ನೀರಿಗೆ ಬಿದ್ದು ಸಾವನ್ನಪ್ಪಿದ್ದು, ಮೃತರೆಲ್ಲರೂ ಹುಬ್ಬಳ್ಳಿ ಮೂಲದವರೆಂದು ತಿಳಿದುಬಂದಿದೆ.
ದಾದಾ ಪೀರ್ (31), ಅಲಿ (25), ಮೋಯಿನುದ್ದೀನ್ (37) ಎಂಬುವವರೇ ಮೃತ ದುರ್ಧೈವಿಗಳು. ಜಲಪಾತದ ತುತ್ತ ತುದಿ 'ಮುಂಗಾರು ಮಳೆ ಸ್ಪಾಟ್' ವೀಕ್ಷಿಸಲು ತೆರಳಿದ ಈ ಮೂವರು ಜಲಪಾತದ ತುದಿಯ ಬಂಡೆಯ ಮೇಲೆ ನಿಂತಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಜೋಗ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.