ರೋಜರ್ಕಪ್ ಮುಡಿಗೇರಿಸಿಕೊಂಡ ಸೆರೆನಾ
ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಅಮೆರಿಕದ ಸೆರಿನಾ ವಿಲಿಯಮ್ಸ್ ಅವರು ಪ್ರಸಕ್ತ ಸಾಲಿನ ರೋಜರ್ಕಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೊರಾಂಟೋ: ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಅಮೆರಿಕದ ಸೆರಿನಾ ವಿಲಿಯಮ್ಸ್ ಅವರು ಪ್ರಸಕ್ತ ಸಾಲಿನ ರೋಜರ್ಕಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೊರಾಂಟೋದಲ್ಲಿ ಇಂದು ನಡೆದ ರೋಜರ್ಕಪ್ ಟೆನ್ನಿಸ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್, ರೊಮೆನಿಯಾದ ಕ್ರಿಸ್ಟಿಯಾ ಅವರ ವಿರುದ್ಧ 6-2, 6-0 ಅಂತರದ ಭರ್ಜರಿ ಜಯ ದಾಖಲಿಸುವ ಮೂಲಕ ಮತ್ತೆ ರೋಜರ್ಕಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವ ವಿಖ್ಯಾತ ಆಟಗಾರ್ತಿಯರಾದ ಮರಿಯಾ ಶರ್ಪೋವಾ, ವಿಕ್ಟೋರಿಯಾ ಅಜರೆಂಕಾ ಮತ್ತು ಸ್ನಾಯು ಸೆಳೆತದಿಂದ ಸರಣಿಯ ಆರಂಭದಲ್ಲೇ ಹೊರಬಿದ್ದ ಬರ್ಟೋಲಿ ಅವರ ಅನುಪಸ್ಥಿತಿಯಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು 8ನೇ ಡಬ್ಲ್ಯೂಟಿಎ ಕಪ್ ಅನ್ನು ಜಯಿಸಿದ್ದಾರೆ. ವೈಯುಕ್ತಿಕವಾಗಿ ಸೆರೆನಾಗೆ ಇದು ಮೂರನೇ ರೋಜರ್ಕಪ್ ಸರಣಿ ವಿಜಯವಾಗಿದೆ.
ಪಂದ್ಯದ ಆರಂಭದಿಂದಲೂ ರೊಮೆನಿಯಾ ಆಟಗಾರ್ತಿಯ ಮೇಲೆ ಪ್ರಭುತ್ವ ಸಾಧಿಸಿದ ಸೆರೆನಾ, ಪಂದ್ಯದ ಯಾವ ಭಾಗದಲ್ಲಿಯೂ ಕೂಡ ತಮ್ಮ ಹೋರಾಟವನ್ನು ಬಿಟ್ಟುಕೊಡಲಿಲ್ಲ. ಅಂತಿಮವಾಗಿ 6-2, 6-0 ಭಾರಿ ಅಂತರದ ಜಯ ದಾಖಲಿಸಿ ರೋಜರ್ಕಪ್ ಗೆದ್ದಿದ್ದಾರೆ.