ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅರ್ಜುನ ಪ್ರಶಸ್ತಿಗೆ ಕೊಹ್ಲಿ, ಖೇಲ್ ರತ್ನಗೆ ರೊಂಜನ್ ಆಯ್ಕೆ

ವಿರಾಟ್ ಕೊಹ್ಲಿ ಅವರು ಅರ್ಜುನ ಪ್ರಶಸ್ತಿಗೆ ನಾಮಕರಣಗೊಂಡಿದ್ದು, ಖೇಲ್‌ರತ್ನಗೆ ಶೂಟರ್..

Srinivasa Murthy VN
Updated On : 13 Aug 2013, 5:19 am

ನವದೆಹಲಿ: ಭಾರತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರು ಅರ್ಜುನ ಪ್ರಶಸ್ತಿಗೆ ನಾಮಕರಣಗೊಂಡಿದ್ದು, ಚಿನ್ನದ ಪದಕ ವಿಜೇತ ಶಾರ್ಪ್ ಶೂಟರ್ ರೊಂಜನ್ ಸೋಧಿ ಅವರ ಹೆಸರು ಖೇಲ್‌ರತ್ನ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

2013ರ ಕ್ರೀಡಾ ಪ್ರಶಸ್ತಿಗೆ ಹಲವು ಕ್ರೀಡಾಪಟುಗಳ ಹೆಸರುಗಳನ್ನು ಶಿಫಾರಸು ಮಾಡಲಾಗಿದ್ದು, ಈ ಪೈಕಿ ಭಾರತೀಯ ಕ್ರೀಡಾರಂಗದ ಒಟ್ಟು 14 ಆಟಗಾರರ ಹೆಸರು ಬಹಿರಂಗಗೊಂಡಿದೆ. ಜಿಂಬಾಬ್ವೆಯಲ್ಲಿ ನಡೆದ ಏಕದಿನ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತೆಯೇ ವಿಶ್ವ ಶೂಟಿಂಗ್ ಸ್ಪರ್ಧೆಯಲ್ಲಿ ಸತತ ಎರಡು ಬಾರಿ ಚಿನ್ನದ ಪದಕ ಗಳಿಸಿದ ಶಾರ್ಪ್ ಶೂಟರ್ ರೊಂಜನ್ ಸೋಧಿ ಅವರನ್ನು ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಇತ್ತೀಚೆಗೆ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಸಾಧಿಸಿದ ಪಿ.ವಿ. ಸಿಂಧು ಅವರ ಹೆಸರು ಕೂಡ ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನಪಡೆದಿದ್ದು, ಪಟ್ಟಿಯಲ್ಲಿರುವ ಕ್ರೀಡಾ ಪಟುಗಳ ಹೆಸರು ಈ ಕೆಳಗಿನಂತಿದೆ.

ಅರ್ಜುನ ಪ್ರಶಸ್ತಿ:-
ವಿರಾಟ್ ಕೊಹ್ಲಿ(ಕ್ರಿಕೆಟ್)
ಚೆಕ್ರೊವೊಲು ಸ್ವುರೊ(ಆರ್ಚರಿ)
ರಂಜಿತ್ ಮಹೇಶ್ವರಿ(ಅಥ್ಲೆಟಿಕ್ಸ್)
ಪಿ.ವಿಯ.ಸಿಂಧು(ಬ್ಯಾಡ್ಮಿಂಟನ್)
ಕವಿತಾ ಚಹಲ್(ಬಾಕ್ಸಿಂಗ್)
ರೂಪೇಶ್ ಶಾ(ಸ್ನೂಕರ್)
ಗಗನ್ ಜೀತ್ ಬುಲ್ಲರ್(ಗಾಲ್ಫ್)
ಸಾಬಾ ಅಂಜುಮ್(ಹಾಕಿ)
ರಾಜ್‌ಕುಮಾರಿ ರಾಥೋಡ್(ಶೂಟಿಂಗ್)
ಜೋಶ್ನಾ ಚಿನ್ನಪ್ಪ(ಸ್ಕ್ವಾಷ್)
ಮೌಮದಾಸ್(ಟೇಬಲ್ ಟೆನ್ನಿಸ್)
ನೆಹಾ ರತಿ(ರೆಸ್ಟ್‌ಲಿಂಗ್)
ಧರ್ಮೇಂದ್ರ ದಲಾಲ್(ರೆಸ್ಟ್‌ಲಿಂಗ್)
ಅಮಿತ್ ಕುಮಾರ್ ಸರೋಹ(ಅಥ್ಲೆಟಿಕ್ಸ್)

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ:- ರಂಜನ್ ಸೋಧಿ (ಶೂಟಿಂಗ್)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement