ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಗೆ ವೀಸಾ ನೀಡುವುದಿಲ್ಲ: ಅಮೆರಿಕ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ವೀಸಾ ನೀಡಲಾಗುವುದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

Srinivasa Murthy VN
Updated On : 16 Aug 2013, 5:02 am

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ವೀಸಾ ನೀಡಲಾಗುವುದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವೀಸಾ ವಿಚಾರದ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯದ ಆಯೋಗದ ಅಧ್ಯಕ್ಷ ಕತ್ರಿನಾ ಲಾಂಟೋಸ್ ಸ್ವೆಟ್ ಅವರು, ವೀಸಾ ನೀಡಿಕೆ ವಿಚಾರವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕತ್ರಿನಾ ಲಾಂಟೋಸ್ ಸ್ವೆಟ್ ಅವರು ಮಾತನಾಡಿದ್ದು, ಮೋದಿ ಅವರ ವೀಸಾ ನಿರಾಕರಣೆಯನ್ನು ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದರು.

ನರೇಂದ್ರಮೋದಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆಗಳ ಕುರಿತು ಮಾತನಾಡಿದ ಸ್ವೆಟ್ ಅವರು, ಭಾರತದ ಮುಂದಿನ ಪ್ರಧಾನಿ ಯಾರಾಗಬೇಕೆಂಬುದನ್ನು ಆ ದೇಶದ ಹೊರಗಿನವನಾಗಿ ಅಥವಾ ವ್ಯಕ್ತಿಗತವಾಗಿ ನಾನು ಹೇಳಲು ಸಾಧ್ಯವಿಲ್ಲ. ಆದರೆ ಭಾರತದ ಪ್ರಜೆಗಳ ಮೇಲೆ ಅತಿ ದೊಡ್ಡ ಜವಾಬ್ದಾರಿ ಇದ್ದು, ಅವರೇ ತಮ್ಮ ಮುಂದಿನ ನಾಯಕರನ್ನು ಅತ್ಯಂತ ಎಚ್ಚರಿಕೆಯಿಂದ ಆರಿಸಬೇಕಿದೆ ಎಂದು ಹೇಳಿದರು.

ಅಂತೆಯೇ ಮೋದಿ ವೀಸಾ ನೀಡಿಕೆ ಕುರಿತು ಮಾತನಾಡಿರುವ ಸ್ವೆಟ್ ಅವರು, 2002ರ ಗುಜರಾತ್ ನರಮೇಧದ ಪ್ರಕರಣದಲ್ಲಿ ಮೋದಿ ಅವರ ಹಸ್ತಕ್ಷೇಪ ಕುರಿತು ಗಂಭೀರ ಸಂಶಯವಿದ್ದು, ಅದು ನಿವಾರಣೆಯಾಗುವವರೆಗೂ ವೀಸಾ ನಿರಾಕರಣೆಯನ್ನು ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.

ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆ ಕುರಿತ ಪ್ರಕರಣಗಳನ್ನು ಅಧ್ಯಯನ ಮಾಡುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement