ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಮದ್ರಾಸ್ ಕೆಫೆ'ಗೆ ತ.ನಾಡಿನಲ್ಲಿ ವಿರೋಧ: ನಾಳೆ ವಿಶೇಷ ಪ್ರದರ್ಶನ

'ಮದ್ರಾಸ್ ಕೆಫೆ' ಚಿತ್ರ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಾಳೆ ತಮಿಳುನಾಡಿನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

Srinivasa Murthy VN
Updated On : 17 Aug 2013, 5:09 am

ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಾಹಂ ಮತ್ತು ನಟಿ ನರ್ಗೀಸ್ ಫಕ್ರಿ ನಟನೆಯ 'ಮದ್ರಾಸ್ ಕೆಫೆ' ಚಿತ್ರ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಾಳೆ ತಮಿಳುನಾಡಿನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಶಾರುಖ್ ಖಾನ್ ಅಭಿನಯದ ಚೆನ್ನೈ ಎಕ್ಸ್ಪ್ರೆಸ್ ಚಿತ್ರದ ವಿವಾದದ ನಂತರ ಬಾಲಿವುಡ್ನ ಮತ್ತೊಂದು ಚಿತ್ರ ವಿವಾದಕ್ಕೀಡಾಗಿದ್ದು, ನಟ ಜಾನ್ ಅಬ್ರಾಹಂ ನಟನೆಯ 'ಮದ್ರಾಸ್ ಕೆಫೆ' ಚಿತ್ರ ಪ್ರದರ್ಶನಕ್ಕೆ ತೀವ್ರವಿರೋಧ ವ್ಯಕ್ತವಾಗಿದೆ. ಚಿತ್ರದಲ್ಲಿ ತಮಿಳರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ, ತಮಿಳು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿವೆ.

ಹೀಗಾಗಿ ಮದ್ರಾಸ್ ಕೆಫೆ ಚಿತ್ರತಂಡ ನಾಳೆ ತಮಿಳುನಾಡಿನಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದು, ತಮಿಳು ಸಂಘಟನೆಗಳು ಚಿತ್ರ ವೀಕ್ಷಿಸಿದ ನಂತರ ಚಿತ್ರವನ್ನು ತೆರೆಗೆ ತರಲು ನಿರ್ಧರಿಸಿದ್ದಾರೆ. ನಾಳೆ ನಡೆಯಲಿರುವ ಮದ್ರಾಸ್ ಕೆಫೆ ವಿಶೇಷ ಪ್ರದರ್ಶನದಲ್ಲಿ ತಮಿಳು ಸಂಘಟನೆಗಳು ತಮಗಿಷ್ಟವಿಲ್ಲದ ಅಥವಾ ತಮಿಳರ ವಿರುದ್ಧ ಅವಹೇಳನಕಾರಿಯಾಗಿ ಚಿತ್ರಿಸಿರುವ ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಬಹುದು. ಹೀಗಾಗಿ ಚಿತ್ರ ತೆರೆಗೆ ಬರಲು ಮತ್ತಷ್ಟು ವಿಳಂಬವಾಗಲಿದೆ ಎಂದು ಮೂಲಗಳು ತಿಳಿಸಿವೆ.

'ಮದ್ರಾಸ್ ಕೆಫೆ' ಮೂಲತಃ ಶ್ರೀಲಂಕಾದಲ್ಲಿರುವ ತಮಿಳರ ಕುರಿತಾದ ಚಿತ್ರಕಥೆ ಹೊಂದಿದ್ದು, ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಆಧರಿಸಿ ಚಿತ್ರ ತಯಾರಿಸಲಾಗಿದೆ. ಚಿತ್ರವನ್ನು ಶೂಜಿತ್ ಸರ್ಕಾರ್ ಅವರು ನಿರ್ದೇಶನ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement