ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೆಮಿಕಲ್ ಪ್ರಯೋಗದ ವಿರುದ್ಧ ಒಬಾಮ ಗುಡುಗು

Srinivasa Murthy VN
Updated On : 25 Aug 2013, 6:27 am

ನವದೆಹಲಿ: ಸಿರಿಯಾ ಅಧ್ಯಕ್ಷ ಅಸ್ಸಾದ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು, ಅಧ್ಯಕ್ಷ ಅಸ್ಸಾದ್ ನಡೆಸುತ್ತಿರುವ ಕೆಮಿಕಲ್ ದಾಳಿ ವಿರುದ್ಧ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಮತ್ತು ಆಡಳಿತ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಸಿರಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ವರೆಗೂ ಸುಮಾರು 850ಕ್ಕೂ ಹೆಚ್ಚು ನಾಗರೀಕರು ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ಪ್ರತಿಭಟನಾಕಾರರ ವಿರುದ್ಧ ಸಿರಿಯಾ ಸೈನಿಕರು ನಡೆಸುತ್ತಿರುವ ವಿಷಾನಿಲ ಪ್ರಯೋಗದಿಂದಲೇ ನೂರಾರು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವೈಧ್ಯರು ತಿಳಿಸಿದ್ದಾರೆ. ಹೀಗಾಗಿ ಸಿರಿಯಾ ಹಿಂಸಾಚಾರದ ವಿಚಾರವಾಗಿ ಮಧ್ಯಪ್ರವೇಶಿಸಿರುವ ಅಮೆರಿಕ, ನಾಗರೀಕರ ಮೇಲೆ ವಿಷಾನಿಲ ಪ್ರಯೋಗ ಮಾಡುತ್ತಿರುವುದು ಖಾತರಿಯಾದರೆ ಸಿರಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಪೆಂಟಗಾನ್ ವರದಿ ಬಿಡುಗಡೆ ಮಾಡಿದೆ.

ಈ ನಡುವೆ ಸಿರಿಯಾ ಕ್ರಮವನ್ನು ಖಂಡಿಸಿದ್ದ ಅಮೆರಿಕ ಸಿರಿಯಾಗೆ ತನ್ನ ನೌಕದಳವನ್ನು ರವಾನಿಸಿತ್ತು. ಅಲ್ಲದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಯುಕೆ ಅಧ್ಯಕ್ಷ ಡೇವಿಡ್ ಕೆಮರೂನ್, ಸಿರಿಯಾ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಂತೆಯೇ ಸಿರಿಯಾ ಕ್ರಮದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.

ಸಿರಿಯಾ ಅಧ್ಯಕ್ಷ ಅಸ್ಸಾದ್ ಅವರ ಆಡಳಿತವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಅಧ್ಯಕ್ಷ ಅಸ್ಸಾದ್ ಅವರು ತಮ್ಮ ಸೇನೆಯನ್ನು ಬಳಸಿ ಪ್ರತಿಭಟನಾಕಾರರ ವಿರುದ್ಧ ವಿಷಾನಿಲ ಪ್ರಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅಮೆರಿಕ ಆರೋಪವನ್ನು ತಳ್ಳಿಹಾಕಿರುವ ಸಿರಿಯಾ ಅಧ್ಯಕ್ಷ ಅಸ್ಸಾದ್ ಅವರು, ನಾವು ಅಂತಹ ಹೀನ ಕೃತ್ಯಕ್ಕೆ ಕೈ ಹಾಕಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement