ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

3 ಕೋಟಿ ಮೌಲ್ಯದ ಮಾದಕವಸ್ತು ಪತ್ತೆ ಮಾಡಿದ 'ಶ್ವಾನ'ದಳ

ಮುಂಬೈ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3.5 ಕೋಟಿ ಮೌಲ್ಯದ 16 ಕೆಜಿ ಮಾದಕ ವಸ್ತುವನ್ನು ಶ್ವಾನದಳ ಪತ್ತೆ ಮಾಡಿದೆ.

ಫೈಲ್ ಚಿತ್ರ
Srinivasa Murthy VN
Updated On : 4 Dec 2013, 6:13 am

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3.5 ಕೋಟಿ ಮೌಲ್ಯದ 16 ಕೆಜಿ ಮಾದಕ ವಸ್ತುವನ್ನು ಶ್ವಾನದಳ ಪತ್ತೆ ಮಾಡಿದೆ.

ವಿಮಾನ ನಿಲ್ದಾಣದ ಅತ್ಯಾಧುನಿಕ ಶೋಧನಾ ಯಂತ್ರವೂ ಪತ್ತೆ ಮಾಡದ ಭಾರಿ ಪ್ರಮಾಣದ ಮಾದಕವಸ್ತುವನ್ನು ಸ್ನಿಫರ್ ಡಾಗ್ ಸ್ಕ್ವಾಡ್ (ಶ್ವಾನದಳ) ಪತ್ತೆ ಮಾಡಿದ್ದು, ವಿದೇಶಿ ಮಹಿಳೆಯೊಬ್ಬಳು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 16 ಕೆಜಿ ಮೌಲ್ಯದ ಮಾದಕವಸ್ತುವನ್ನು ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿದೇಶಿ ಮಹಿಳೆಯೊಬ್ಬಳು ದಕ್ಷಿಣ ಆಫ್ರಿಕಾದ ಪಾಸ್ಪೋರ್ಟ್ನ ಮೂಲಕ ಅಕ್ರಮವಾಗಿ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಸಾಗಿಸಲು ಯತ್ನಿಸಿದ್ದಳು. ಸಾಮರ್ಥ್ಯ ಉತ್ತೇಜಕ ಔಷಧಿಗಳ ಹೆಸರಲ್ಲಿ ಈ ಮಾದಕವಸ್ತುವನ್ನು ಸಾಗಿಸಲಾಗುತ್ತಿತ್ತು. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿಗಳು ಇದನ್ನು ಪತ್ತೆ ಮಾಡುವಲ್ಲಿ ವಿಫಲರಾಗಿದ್ದರು. ನಿಲ್ದಾಣದಲ್ಲಿ ಅಳವಡಿಸಲಾಗಿರುವ ಶೋಧನಾ ಯಂತ್ರಗಳು ಕೂಡ ಮಹಿಳೆ ಬ್ಯಾಗಿನಲ್ಲಿದ್ದ ಮಾದಕವಸ್ತುವನ್ನು ಗುರುತಿಸುವಲ್ಲಿ ವಿಫಲವಾಗಿತ್ತು.

ಆದರೆ ಅದೇ ಸಮಯದಲ್ಲಿ ಸ್ಥಳದಲ್ಲಿದ್ದ ಆನ್ನಿ ಎಂಬ ಶ್ವಾನವು ಬ್ಯಾಗಿನಿಂದ ಬರುತ್ತಿದ್ದ ವಾಸನೆಯ ಜಾಡು ಹಿಡಿದು ಮಹಿಳೆಯನ್ನು ಪತ್ತೆ ಮಾಡಿತ್ತು. ಬಳಿಕೆ ಮಹಿಳೆಯ ಬಳಿಯಿದ್ದ ಬ್ಯಾಗನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಅಕ್ರಮ ಬಯಲಿಗೆ ಬಂದಿದೆ. ತಕ್ಷಣವೇ ಮಹಿಳೆಯನ್ನು ಬಂಧಿಸಿರುವ ಅಧಿಕಾರಿಗಳು, ಆಕೆಯನ್ನು ತನಿಖೆ ನಡೆಸುತ್ತಿದ್ದಾರೆ. ಅಕ್ರಮವನ್ನು ಬಯಲಿಗೆಳೆದ ಶ್ವಾನ ಆನ್ನಿಗೆ ಇಗಿನ್ನೂ ಕೇವಲ 11 ತಿಂಗಳುಗಳಷ್ಟೇ. ಇತ್ತೀಚೆಗಷ್ಟೇ ಅದನ್ನು ತರಬೇತುಗೊಳಿಸಿ ಶ್ವಾನದಳಕ್ಕೆ ಸೇರ್ಪಡೆಗೊಳಿಸಲಾಗಿತ್ತು. ತರಬೇತಿ ಪೂರ್ಣಗೊಳಿಸಿದ ಬಳಿಕ ಆನ್ನಿ ಪತ್ತೆ ಮಾಡಿದ ಮೊದಲ ಪ್ರಕರಣ ಇದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement