ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್ ಯುದ್ಧ ಗೆಲ್ಲುವುದಿಲ್ಲ; ಷರೀಫ್‌ಗೆ ಪ್ರಧಾನಿ ಸಿಂಗ್ ತಿರುಗೇಟು

ಕಾಶ್ಮೀರ ವಿವಾದ ಕುರಿತು ನವಾಜ್ ಷರೀಫ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ಸಿಂಗ್, ನನ್ನ ಜೀವಾತಾವಧಿಯಲ್ಲಿಯೇ ಪಾಕ್ ಯುದ್ಧ ಗೆಲ್ಲುತ್ತದೆ ಎಂದೆನ್ನಿಸುವುದಿಲ್ಲ ಎಂದು ಹೇಳಿದ್ದಾರೆ.

Srinivasa Murthy VN
Updated On : 4 Dec 2013, 7:17 am

ನವದೆಹಲಿ: ಕಾಶ್ಮೀರ ವಿವಾದ ಕುರಿತು ನವಾಜ್ ಷರೀಫ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ನನ್ನ ಜೀವಾತಾವಧಿಯಲ್ಲಿಯೇ ಪಾಕ್ ಯುದ್ಧ ಗೆಲ್ಲುತ್ತದೆ ಎಂದು ನನಗನ್ನಿಸುವುದಿಲ್ಲ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ನನ್ನ ಜೀವಿತಾವಧಿಯಲ್ಲಿ ಪಾಕಿಸ್ತಾನ ಯುದ್ಧ ಗೆಲ್ಲುತ್ತದೆ ಎಂದು ಅನ್ನಿಸುವುದಿಲ್ಲ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ನಿನ್ನೆ ಪಾಕ್ ಆಕ್ರಮಿತ ಕಾಶ್ಮೀರ ಪ್ರಾಂತ್ಯದ ಬಜೆಟ್ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಪತ್ರಿಕೆಯೊಂದಕ್ಕೆ ಹೇಳಿಕೆ ಬಿಡುಗಡೆ ಮಾಡಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು, ಉಭಯ ದೇಶಗಳ ನಡುವೆ ಕಾಶ್ಮೀರ ವಿವಾದ ಭವಿಷ್ಯದಲ್ಲಿ ಮತ್ತೊಂದು ಯುದ್ಧಕ್ಕೆ ಕಾರಣವಾಗಬಹುದು. ಭಾರತೀಯ ಕಾಶ್ಮೀರವನ್ನು ಸ್ವತಂತ್ರ್ಯಗೊಳಿಸುವುದು ನನ್ನ ಕನಸಾಗಿದ್ದು, ನನ್ನ ಜೀವಿತಾವಧಿಯಲ್ಲಿಯೇ ಅದು ನನಸಾಗುತ್ತದೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದರು.

ಪಾಕ್ ಪ್ರಧಾನಮಂತ್ರಿ ಕಾರ್ಯಾಲಯ 'ಯೂ ಟರ್ನ್‌'
ಪಾಕಿಸ್ತಾನ ಪ್ರಧಾನ ಮಂತ್ರಿಗಳ ಹೇಳಿಕೆಗೆ ಭಾರತದಲ್ಲಿ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಪ್ರಧಾನಿ ನವಾಜ್ ಷರೀಫ್ ಅವರು ಯೂಟರ್ನ್ ಹೊಡೆದಿದ್ದಾರೆ. ಪತ್ರಿಕೆಗೆ ನೀಡಿದ್ದ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿಗಳ ಕಾರ್ಯಾಲಯ ಮತ್ತೊಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

'ನಾವು ಪತ್ರಿಕೆಗೆ ಬಿಡುಗಡೆ ಮಾಡಿದ್ದ ಪ್ರಧಾನಿ ನವಾಜ್ ಷರೀಫ್ ಅವರ ಹೇಳಿಕೆಯನ್ನು ತಿರುಚಲಾಗಿದ್ದು, ನಿನ್ನೆ ಕಾಶ್ಮೀರಕ್ಕೆ (ಪಾಕ್ ಆಕ್ರಮಿತ ಕಾಶ್ಮೀರ) ಭೇಟಿ ನೀಡಿದ್ದ ನವಾಜ್ ಷರೀಫ್ ಅವರು, ಕಾಶ್ಮೀರವನ್ನು ಸ್ವತಂತ್ರ್ಯಗೊಳಿಸುವ ಕನಸು ತಮ್ಮ ಜೀವಿತಾವಧಿಯಲ್ಲಿ ನನಸಾಗ ಬೇಕು ಎಂದಷ್ಟೇ ಹೇಳಿದ್ದರು' ಎಂದು ಪಾಕಿಸ್ತಾನ ಪ್ರಧಾನಿಗಳ ಕಚೇರಿ ಸ್ಪಷ್ಟಪಡಿಸಿದೆ.

ಒಟ್ಟಾರೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರತದ ಕೆಂಗಣ್ಣಿಗೆ ತುತ್ತಾಗಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು, ಇದೀಗ ಮತ್ತೊಂದು ಪತ್ರಿಕಾ ಹೇಳಿಕೆ ನೀಡಿ ವಿವಾದವನ್ನು ತಿರುಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement