ಹಾಕಿ ಎಡವಟ್ಟು: ಕೇಂದ್ರಕ್ಕೆ 'ಸುಪ್ರೀಂ' ಸೂಚನೆ
ಹಾಕಿ ಸಂಸ್ಥೆಯಲ್ಲಿ ಹಿರಿಯ ಮಾಜಿ ಕ್ರೀಡಾಪಟುಗಳೇ ಮುಖಸ್ಥರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಸರ್ಕಾರಕ್ಕೆ ಸೂಚನೆ ನೀಡಿದೆ.
ನವದೆಹಲಿ: ಹಾಕಿ ಸಂಸ್ಥೆಯಲ್ಲಿ ಹಿರಿಯ ಮಾಜಿ ಕ್ರೀಡಾಪಟುಗಳೇ ಮುಖಸ್ಥರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಸರ್ಕಾರಕ್ಕೆ ಸೂಚನೆ ನೀಡಿದೆ.
ಭಾರತೀಯ ಹಾಕಿ ಸಂಸ್ಥೆಯಲ್ಲಿ ನಡೆಯುತ್ತಿರುವ ಎಡವಟ್ಟುಗಳನ್ನು ಶಾಂತವಾಗಿಯೇ ಗಮನಿಸುತ್ತಿದ್ದ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದು, ಇನ್ನುಮುಂದೆ ಹಾಕಿ ಸಂಸ್ಥೆಯಲ್ಲಿ ಕ್ರೀಡಾಪಟುಗಳನ್ನು ಬಿಟ್ಟು ವ್ಯಾಪಾರಸ್ಥರು ಮುಖ್ಯಸ್ಥರಾಗಬಾರದು ಎಂದು ಸೂಚನೆ ನೀಡಿದೆ.
ಭಾರತೀಯ ಹಾಕಿ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ವಿಶೇಷ ಸೂಚನೆ ನೀಡಿದ್ದು, 'ಹಾಕಿ ಸಂಸ್ಥೆಯಲ್ಲಿನ ಗೊಂದಲದಿಂದಾಗಿ ಹಾಕಿ ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿಂದೆ ಪದಕ ಗಳಿಸಿದ್ದ ನಾವು ಈಗ ಕೇವಲ ಅರ್ಹತಾ ಸುತ್ತಿಗಾಗಿ ಪರದಾಡುತ್ತಿದ್ದೇವೆ'.
'ಹಾಕಿ ಸಂಸ್ಥೆಯಲ್ಲಿ ಪ್ರಸ್ತುತ ವ್ಯಾಪಾರಸ್ಥರು ಮುಖ್ಯಸ್ಥರಾಗಿದ್ದು, ಇನ್ನು ಮುಂದೆ ಹಿರಿಯ ಮಾಜಿ ಕ್ರೀಡಾಪಟುಗಳೇ ಸಂಸ್ಥೆಯ ಮುಖ್ಯಸ್ಥರಾಗಿರಬೇಕು' ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.