ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೋಮು ಹಿಂಸಾಚಾರ ಮಸೂದೆ; ಹೇಸಿಗೆಯ ಶಾಸನ: ಬಿಜೆಪಿ

ಕೋಮು ಹಿಂಸಾಚಾರ ಮಸೂದೆ ಸ್ವತಂತ್ರ್ಯ ಭಾರತದ ಅತ್ಯಂತ ಹೇಸಿಗೆಯ ಶಾಸನ ಎಂದು ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.

Srinivasa Murthy VN
Updated On : 7 Dec 2013, 7:39 am

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೋಮು ಹಿಂಸಾಚಾರ ಮಸೂದೆ ಸ್ವತಂತ್ರ್ಯ ಭಾರತದ ಅತ್ಯಂತ ಹೇಸಿಗೆಯ ಶಾಸನ ಎಂದು ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸಲಹಾ ಆಯೋಗ ಸಿದ್ಧಪಡಿಸಿರುವ 2011ರ ಕೋಮು ಹಿಂಸಾಚಾರ ಮಸೂದೆ ಸ್ವತಂತ್ರ್ಯ ಭಾರತದ ಹೇಸಿಗೆಯ ಶಾಸನ ಎನ್ನುವುದರಲ್ಲಿ ನನಗೆ ಯಾವುದೇ ಸಂದೇಹ ಇಲ್ಲ. ಒಂದು ವೇಳೆ ಈ ಮಸೂದೆ ಜಾರಿಯಾಗಿದ್ದೇ ಆದರೆ, ಕೋಮು ಹಿಂಸಾಚಾರ ನಡೆಸಿದ್ದರಿಂದ ತಪ್ಪಿತಸ್ಥ ಭಾವನೆಯಲ್ಲಿರುವ ಮುಜಾಫರ್ ನಗರದ ಜನತೆಗೆ ನಾವು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಈ ಮಸೂದೆ ಪ್ರಕಾರ ಗಲಭೆಗೆ ಸಂಬಂಧಿಸಿದಂತೆ ಒಂದು ಕೋಮಿನವರನ್ನು ಮಾತ್ರ ವಿಚಾರಣೆಗೊಳಪಡಿಸಬಹುದಾಗಿದ್ದು, ಮತ್ತೊಬ್ಬರನ್ನು ಅಲ್ಲ. ಹೀಗಾಗಿ ಇದೊಂದು ವಿವಾದಾತ್ಮಕ ಮಸೂದೆಯಾಗಲಿದೆ ಎಂದು ಜೇಟ್ಲಿ ಹೇಳಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೋಮು ಹಿಂಸಾಚಾರ ನಿಯಂತ್ರಣ ಮಸೂದೆಗೆ ಆರಂಭದಿಂದಲೂ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮಸೂದೆ ಅನುಮೋದನೆಗೊಳ್ಳಲು ತಾವು ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕರು ಹೇಳುತ್ತಿದ್ದಾರೆ. ಈ ಹಿಂದೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಮಸೂದೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. 'ಮಸೂದೆ ಜಾರಿಯಿಂದ ದೇಶದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಮೋದಿ ಮನವಿ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement