ಭಾರಿ ಹಿಮಪಾತಕ್ಕೆ ನಲುಗಿದ 'ದೊಡ್ಡಣ್ಣ'
ಈ ಭಾರಿಯ ಚಳಿಗಾಲ ವಿಶ್ವದ ದೊಡ್ಡಣ್ಣ ಅಮೆರಿಕಗೆ ಭಾರಿ ಹೊಡೆತವನ್ನು ನೀಡಿದ್ದು, ಭಾರಿ ಹಿಮಪಾತದಿಂದಾಗಿ ಅಮೆರಿಕದ ಪ್ರಮುಖ ನಗರಗಳ ಸಂಪರ್ಕ ಬಹುತೇಕ ಕಡಿತಗೊಂಡಿದೆ.
ಟೆಕ್ಸಾಸ್: ಈ ಭಾರಿಯ ಚಳಿಗಾಲ ವಿಶ್ವದ ದೊಡ್ಡಣ್ಣ ಅಮೆರಿಕಗೆ ಭಾರಿ ಹೊಡೆತವನ್ನು ನೀಡಿದ್ದು, ಭಾರಿ ಹಿಮಪಾತದಿಂದಾಗಿ ಅಮೆರಿಕದ ಪ್ರಮುಖ ನಗರಗಳ ಸಂಪರ್ಕ ಬಹುತೇಕ ಕಡಿತಗೊಂಡಿದೆ.
ಅಮೆರಿಕದ ಪ್ರಮುಖ ನಗರಗಳಾದ ಟೆಕ್ಸಾಸ್, ಮೆಕ್ಸಿಕೋ, ಅರ್ಕಾನ್ಸಾಸ್ ಮತ್ತು ಲೂಸಿಯಾನ ನಗರಗಳಲ್ಲಿ ಭಾರಿ ಹಿಮಮಳೆ ಬೀಳುತ್ತಿದ್ದು, ರಸ್ತೆ ಮತ್ತು ರೈಲು ಮಾರ್ಗಗಳು ಸಂಪೂರ್ಣ ಹಿಮದಲ್ಲಿ ಮುಚ್ಚಿಹೋಗಿವೆ. ಕೇವಲ ಶುಕ್ರವಾರ ಒಂದೇ ದಿನದಲ್ಲಿ ಅಮೆರಿಕದಲ್ಲಿ ಸುಮಾರು 1900 ವಿಮಾನಗಳ ಪ್ರಯಾಣ ವ್ಯತಿರಿಕ್ತ ಹವಾಮಾನದಿಂದಾಗಿ ಸ್ಥಗಿತಗೊಂಡಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಮೆಕ್ಸಿಕೋ ಮತ್ತು ಟೆಕ್ಸಾಸ್ ನಗರದಲ್ಲಿ ಭಾರಿ ಹಿಮಪಾತದಿಂದ ವಿದ್ಯುತ್ ಕೈಕೊಟ್ಟಿದ್ದು, ಈ ನಗರಗಳು ಬಹುತೇಕ ಅಂಧಕಾರದಲ್ಲಿ ಮುಳುಗಿವೆ. ಅತೀವ ಚಳಿಯಿಂದಾಗಿ ಈ ಅವಳಿ ನಗರಗಳಲ್ಲಿ ಈವರೆಗೂ 3 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರಿ ಹಿಮಪಾತ ಮತ್ತು ತೀವ್ರ ಚಳಿಯಿಂದಾಗಿ ಅಮೆರಿಕದ ನಾಗರೀಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳು ಮತ್ತು ವಿಮಾನಗಳ ಸೇವೆ ಹಿಮದಿಂದಾಗಿ ಸ್ಥಗಿತಗೊಂಡಿವೆ.
ರಸ್ತೆಗಳಲ್ಲಿ ತುಂಬಿರುವ ಹಿಮವನ್ನು ತೆಗೆಯಲು ಸ್ಥಳೀಯ ಕಾರ್ಪೋರೇಷನ್ ತುರ್ತು ಕ್ರಮ ಕೈಗೊಂಡಿದ್ದು, ಸ್ಥಳೀಯ ಆಡಳಿತ ಮತ್ತು ಕೆಲ ಸಾಮಾಜಿಕ ಸಂಘಟನೆಗಳು ನಾಗರೀಕರ ಸಹಾಯಕ್ಕೆ ಧಾವಿಸಿವೆ.