ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲೋಕಪಾಲ್‌ಗಾಗಿ ನಾಳೆಯಿಂದ ಧರಣಿ: ಅಣ್ಣಾ ಹಜಾರೆ

ಜನಲೋಕಪಾಲ್ ಮಸೂದೆ ಜಾರಿಗಾಗಿ ಮಂಗಳವಾರದಿಂದ ಮತ್ತೆ ಉಪವಾಸ ಧರಣಿ ಆರಂಭಿಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

Srinivasa Murthy VN
Updated On : 9 Dec 2013, 5:47 am

ಮುಂಬೈ: ಜನಲೋಕಪಾಲ್ ಮಸೂದೆ ಜಾರಿಗಾಗಿ ಮಂಗಳವಾರದಿಂದ ಮತ್ತೆ ಉಪವಾಸ ಧರಣಿ ಆರಂಭಿಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ಮುಂಬೈನ ರಾಲೇಗಣ್ ಸಿದ್ದಿ ಗ್ರಾಮದಲ್ಲಿ ಮಾತನಾಡಿದ ಅಣ್ಣಾ ಹಜಾರೆ, ಕಾಂಗ್ರೆಸ್ ತನ್ನ ಮಾತು ತಪ್ಪಿದ್ದು, ಲಿಖಿತ ಆಶ್ವಾಸನೇ ನೀಡಿಯೂ ಸಹ ಅದು ಇದುವರೆವಿಗೂ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಿಲ್ಲ. ಹೀಗಾಗಿ ನಾಳೆಯಿಂದಲೇ ತಾವು ಮತ್ತೆ ಧರಣಿ ಆರಂಭಿಸುವುದಾಗಿ ಹೇಳಿದ್ದಾರೆ.

'ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬೆಲೆ ಏರಿಕೆಯಿಂದಾಗಿ ದೇಶದ ಜನ ತತ್ತರಿಸಿಹೋಗಿದ್ದಾರೆ. ತಮ್ಮನ್ನು ನಂಬಿ ಮತ ನೀಡಿದ ದೇಶದ ಜನತೆಗೆ ಸರಿಯಾಗಿ ಪ್ರತಿಕ್ರಿಯಿಸದೇ ಕಾಂಗ್ರೆಸ್ ದ್ರೋಹ ಮಾಡುತ್ತಿದೆ. ಜನಲೋಕಪಾಲ್‌ಗಾಗಿ ನಾನು ಧರಣಿ ನಡೆಸುತ್ತಿದ್ದ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಸೂದೆ ಜಾರಿಗೊಳಿಸುವುದಾಗಿ ಲಿಖಿತ ಭರವಸೆ ನೀಡಿದ್ದರು. ಅದನ್ನು ನಂಬಿದ ನಾನು ಧರಣಿಯನ್ನು ಅಂತ್ಯಗೊಳಿಸಿದ್ದೆ. ಆದರೆ ಕಾಂಗ್ರೆಸ್ ವಿಶ್ವಾಸಘಾತ ಮಾಡಿದ್ದು, ನಾನು ನಾಳೆಯಿಂದ ಮತ್ತೆ ಧರಣಿ ಕೂರುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಅಲ್ಲದೆ ಚಳಿಗಾಲದ ಅಧಿವೇಶನದಲ್ಲಿಯೇ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ಅಣ್ಮಾ ಹಜಾರೆ, ನಾಳೆ ನವದೆಹಲಿಯ ಯಾದವ್ ಬಾಬಾ ಮಂದಿರದಲ್ಲಿ ಧರಣಿ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement