ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಜಾಫರನಗರದಲ್ಲಿ ಮತ್ತೊಂದು ಗಲಭೆ

ಉತ್ತರ ಪ್ರದೇಶ ಮುಜಾಫರನಗರದಲ್ಲಿ ಮತ್ತೊಮ್ಮೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ನಗರದಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.

Srinivasa Murthy VN
Updated On : 25 Dec 2013, 4:21 am

ಮುಜಾಫರನಗರ: ಉತ್ತರ ಪ್ರದೇಶ ಮುಜಾಫರನಗರದಲ್ಲಿ ಮತ್ತೊಮ್ಮೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ನಗರದಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.

ಇತ್ತೀಚಗಷ್ಟೇ ಮುಜಾಫರನಗರದಲ್ಲಿ ನಡೆದಿದ್ದ ಕೋಮು ಗಲಭೆ ಮಾಸುವ ಮುನ್ನವೇ ಇದೀಗ ಅಂತಹುದೇ ಮತ್ತೊಂದು ಗಲಭೆ ನಡೆದ ಕುರಿತು ಮಾಹಿತಿಗಳು ಲಭ್ಯವಾಗಿವೆ. ಮುಜಾಫರನಗರದ ಅತ್ಸಿಂದಾವ್ಲಿ ಗ್ರಾಮದ ಮಹಿಳೆಯೊಬ್ಬಳೊಂದಿಗೆ ಯುವಕರ ಗುಂಪೊಂದು ಅಸಭ್ಯವಾಗಿ ನಡೆದುಕೊಂಡ ಪರಿಣಾಮ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ರಾತ್ರಿ ನಡೆದಿದ್ದ ಈ ಘಟನೆಯಿಂದಾಗಿ ಇಡೀ ಮುಜಾಫರನಗರದಲ್ಲಿ ಅಘೋಷಿತ ಬಂದ್ ವಾತಾವರಣ ನೆಲೆಸಿದೆ. ನಿನ್ನೆ ರಾತ್ರಿ ನಡೆದ ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆಗಳು ದೌಡಾಯಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement