ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು
ಭಾರತದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಸೋಲು ಕಂಡಿದೆ.
ಮುಂಬೈ: ಭಾರತದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಸೋಲು ಕಂಡಿದೆ.
ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ವನಿತೆಯರು 32 ರನ್ ಗಳ ಸೋಲನ್ನನುಭವಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಮಹಿಳಾ ತಂಡ ನಿಗದಿತ 50 ಓವರ್ ಗಳಲ್ಲಿ ಕ್ಯಾಪ್ಟನ್ ಎಡ್ವರ್ಡ್ಸ್ ಅವರ ಶತಕ(109)ದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 272 ರನ್ ಗಳನ್ನು ಕಲೆಹಾಕಿತು. 273 ರನ್ ಗಳ ಬೃಹತ್ ಗುರಿ ಪಡೆದ ಭಾರತ ತಂಡ ಹರ್ಮನ್ ಪ್ರೀತ್ ಕೌರ್ (107) ಅವರ ಶತಕದ ಹೊರತಾಗಿಯೂ 32 ರನ್ ಗಳಿಂದ ಸೋತಿದೆ.
ಭಾರತ ಒಟ್ಟು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳನ್ನಷ್ಟೇ ಗಳಿಸಿತು.