ಐಪಿಎಲ್ 6: ಹರಾಜು ಪ್ರಕ್ರಿಯೆ ಆರಂಭ
ಇಂಡಿಯನ್ ಪ್ರೀಮಿಯರ್ ಲೀಗ್ನ 6ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಭಾನುವಾರ ಚೆನ್ನೈನಲ್ಲಿ ಆರಂಭಗೊಂಡಿದೆ.
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನ 6ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಭಾನುವಾರ ಚೆನ್ನೈನಲ್ಲಿ ಆರಂಭಗೊಂಡಿದೆ.
ಇಂದು ಚೆನ್ನೈನ ಖಾಸಗಿ ಹೊಟೆಲ್ ನಲ್ಲಿ ಆರಂಭಗೊಂಡ ಐಪಿಎಲ್ 6ನೇ ಆವೃತ್ತಿಯ ಬಿಡ್ಡಿಂಗ್ನಲ್ಲಿ ಒಟ್ಟು 108 ಆಟಗಾರರ ಹರಾಜು ನಡೆಯುತ್ತಿದೆ. ಹರಾಜು ಪ್ರಕ್ರಿಯೆಯ ಆರಂಭದಲ್ಲಿಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಮುಂಬೈ ತಂಡದ ಪಾಲಾಗಿದ್ದಾರೆ. ಪಾಟಿಂಗ್ ಒಟ್ಟು 2.12 ಕೋಟಿ ರು.ಗಳಿಗೆ ಮುಂಬೈ ಪಾಲಾಗಿದ್ದಾರೆ.
ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ ಮೈಕಲ್ ಕ್ಲಾರ್ಕ್ 2.12 ಕೋಟಿ ರು.ಗಳಿಗೆ ಪುಣೆಯ ಪಾಲಾಗಿದ್ದಾರೆ. ಇದುವರೆಗೂ ನಡೆದಿರುವ ಒಟ್ಟಾರೆ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಟಿ-20 ಸ್ಪೆಷಲಿಸ್ಟ್ ಗ್ಲೆನ್ ಮ್ಯಾಕ್ಸ್ ವೆಲ್ಲ್ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದಾರೆ. ಮ್ಯಾಕ್ಸ್ವೆಲ್ ಅವರನ್ನು ಪಡೆಯಲು ಹೈದರಾಬಾದ್ ಮತ್ತು ಪುಣೆ ತಂಡಗಳು ಪರಸ್ಪರ ಪೈಪೊಟಿಗಿಳಿದಿದ್ದವು. ಅಂತಿಮವಾಗಿ 5.3 ಕೋಟಿ ರು.ಗಳನ್ನು ನೀಡಿ ಮುಂಬೈ ಮಾಕ್ಸ್ ವೆಲ್ ರನ್ನು ಪಡೆಯಿತು.
ಉಳಿದಂತೆ ಭಾರತದ ಆರ್ ಪಿ ಸಿಂಗ್(2.1 ಕೋಟಿ) ಬೆಂಗಳೂರು ತಂಡ, ಅಭಿಷೇಕ್ ನಾಯರ್ (3.5ಕೋಟಿ) ಪುಣೆ ತಂಡಕ್ಕೆ, ದ.ಆಫ್ರಿಕಾದ ಜೊಹಾನ್ ಬೋತಾ (2.1 ಕೋಟಿ) ದೆಹಲಿ ತಂಡದ ಪಾಲಾಗಿದ್ದಾರೆ.