ವಾಲೆಂಟೈನ್ಸ್ ಡೇ ಆಚರಣೆಗೆ ಬಿಡುವುದಿಲ್ಲ: ಮುತಾಲಿಕ್
ದಾವಣಗೆರೆ: ವಾಲೆಂಟೈನ್ಸ್ ಡೇ ಆಚರಣೆಗೆ ಬಿಡುವುದಿಲ್ಲ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಭಾನುವಾರ ದಾವಣಗೆರೆಯಲ್ಲಿ ಮಾತನಾಡಿದ ಮುತಾಲಿಕ್ ವಿದೇಶಿ ಸಂಸ್ಕೃತಿಯ ವಾಲೆಂಟೈನ್ಸ್ ಡೇ ಆಚರಣೆಗೆ ಶ್ರೀರಾಮ ಸೇನೆ ಅವಕಾಶ ನೀಡುವುದಿಲ್ಲ ಎಂದು ಮುತಾಲಿಕ್ ಗುಡುಗಿದ್ದಾರೆ. ಅಲ್ಲದೆ ವಾಲೆಂಟೈನ್ಸ್ ಡೇಯನ್ನು ನಿಷೇಧಿಸುವ ಕುರಿತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸುತ್ತೇನೆ.
ಫೆ.5 ರಂದು ಸಿಎಂ ಶೆಟ್ಟರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಮುತಾಲಿಕ್ ತಿಳಿಸಿದರು. ಕಳೆದ ವರ್ಷವೂ ಇದೇ ರೀತಿ ಹೇಳಿಕೆ ನೀಡಿದ್ದ ಮುತಾಲಿಕ್ ಮಹಿಳಾ ಸಂಘಟನೆಗಳ ಮತ್ತು ವಿಧ್ಯಾರ್ಥಿ ಸಂಘಟನೆಗಳ ತೀವ್ರ ವಿರೋಧ ಎದುರಿಸಿದ್ದರು.