"ಸತ್ಯಾನಂದ' ಶೀರ್ಷಿಕೆ ಬದಲಿಸಲು ಚಿಂತನೆ
ಬೆಂಗಳೂರು: ಸತ್ಯಾನಂದ ಚಲನಚಿತ್ರದ ಶೀರ್ಷಿಕೆ ಬದಲಿಸಲು ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದಾರೆ.
ಶೀರ್ಷಿಕೆಯಿಂದಲೇ ವಿವಾದ ಹುಟ್ಟುಹಾಕಿದ್ದ ಕನ್ನಡ ಚಲನಚಿತ್ರ ಸತ್ಯಾನಂದ ಇದೀಗ ಮತ್ತೆ ಸುದ್ದಿಯಲ್ಲಿದೆ. ವಿವಾದಿತ ಸ್ವಾಮಿ ನಿತ್ಯಾನಂದನ ಕುರಿತಾಗಿರುವ ಚಿತ್ರವೆಂದು ವಿವಾದ ಹುಟ್ಟುಹಾಕಿದ್ದ ಚಿತ್ರದ ಶೀರ್ಷಿಕೆ ಬದಲಿಸಲು ಚಿತ್ರದ ನಿರ್ಮಾಪಕ ಮತ್ತು ನಿದೇರ್ಶಕ ಮದನ್ ಪಟೇಲ್ ನಿರ್ಧರಿಸಿದ್ದಾರೆ.
ಚಿತ್ರದ ಶೀರ್ಷಿಕೆ ಬದಲಿಸಿಲು ನಿರ್ಧರಿಸಿರುವ ಅವರು ಇದಕ್ಕಾಗಿ ಸಿನಿಮಾ ಕ್ಷೇತ್ರದ ಕೆಲವರ ಸಲಹೆ ಪಡೆಯಲು ಮುಂದಾಗಿದ್ದಾರೆ. ಅಲ್ಲದೆ ನೇರವಾಗಿ ಪ್ರಜೆಗಳೇ ತಮ್ಮ ಚಿತ್ರಕ್ಕೆ ಶೀರ್ಷಿಕೆ ಬಗ್ಗೆ ತಮಗೆ ಸಲಹೆ ನೀಡಬಹುದು ಎಂದು ತಿಳಿಸಿದ್ದಾರೆ.
ಸ್ವಾಮಿ ನಿತ್ಯಾನಂದ ಬದುಕಿನ ಎಳೆಯನ್ನು ಚಿತ್ರದ ಕಥೆಯನ್ನಾಗಿ ತೆಗೆದುಕೊಂಡಿದ್ದಾರೆ ಎಂದು ನಿತ್ಯಾ ಶಿಷ್ಯರು ಕೋರ್ಟ್ ಮೊರೆ ಹೋಗಿ ಚಿತ್ರದ ಬಗ್ಗೆ ವಿವಾದ ಹುಟ್ಟುಹಾಕಿದ್ದರು. ನಂತರ ಸ್ವತಃ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಮದನ್ ಪಟೇಲ್ ಅವರು ತಮ್ಮ ಸತ್ಯಾನಂದ ಚಿತ್ರದ ಸೆನ್ಸಾರ್ ಗೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರು 5 ಲಕ್ಷ ಲಂಚ ಕೇಳಿದ್ದಾರೆ ಎಂದು ಆರೋಪಿಸುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.