ಮಹಿಳಾ ರಾಕ್ ಬ್ಯಾಂಡ್ ಗೆ ಬೆದರಿಕೆ: ಪ್ರಕರಣ ದಾಖಲು
ರಾಕ್ ಬ್ಯಾಂಡ್ ಮಹಿಳೆಯರಿಗೆ ಬೆದರಿಕೆ ಹಾಕಿರುವವರ ವಿರುದ್ಧ ಶ್ರೀನಗರ ಪೊಲೀಸರಲು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಹಿಳಾ ರಾಕ್ ಬ್ಯಾಂಡ್ ಗಳಿಗೆ ಬೆದರಿಕೆ ಹಾಕಿರುವವರ ವಿರುದ್ಧ ಶ್ರೀನಗರ ಪೊಲೀಸರಲು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ರಾಕ್ ಬ್ಯಾಂಡ್ ಗಳಲ್ಲಿ ಮತ್ತು ಆರ್ಕೆಸ್ಟ್ರಾಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆ ಮತ್ತು ಯುವತಿಯರನ್ನು ಗಲ್ಲಿಗೇರಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಮೂಲಭೂತವಾದಿಗಳ ವಿರುದ್ಧ ಶ್ರೀನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾಹಿತಿ ಕಾಯ್ದೆ 66ಎ ಮತ್ತು ಆರ್ ಪಿಸಿ 506ರ ಅಡಿಯಲ್ಲಿ ಅಪರಾಧ ಸಂಚು ರೂಪಿಸಿದ ಕುರಿತು ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ರಾಕ್ ಬ್ಯಾಂಡ್ ಮತ್ತು ಆರ್ಕೆಸ್ಟ್ರಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವತಿಯರು ಇನ್ನು ಮುಂದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಹಾಗೇನಾದರೂ ಪಾಲ್ಗೊಂಡಿದ್ದೇ ಆದರೆ ಅವರನ್ನು ಗಲ್ಲಿಗೇರಿಸುವುದಾಗಿ ಕಾಶ್ಮೀರದ ಮೂಲಭೂತವಾದಿಗಳು ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಬೆದರಿಕೆ ಹಾಕಿದ್ದರು. ಮೂಲಭೂತ ವಾದಿಗಳ ಬೆದರಿಕೆಯನ್ನು ಖಂಡಿಸಿ ಹಲವು ಮಹಿಳಾ ಪರ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ.
ಪ್ರಕರಣ ದಾಖಲಿಸಿಕೊಂಡಿರುವ ಶ್ರೀನಗರ ಪೊಲೀಸರು ಐಟಿ ಕಾಯ್ದೆಯ ಅನ್ವಯ ಆರು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.