ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೆಟ್ಟ ಆಡಳಿತವೇ ಎಲ್ಲ ಸಮಸ್ಯೆಗಳಿಗೆ ಮೂಲ: ನರೇಂದ್ರ ಮೋದಿ

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ನವದೆಹಲಿಯಲ್ಲಿ ನರೇಂದ್ರಮೋದಿ ಅವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.

Srinivasa Murthy VN
Updated On : 6 Feb 2013, 6:07 am

ನವದೆಹಲಿ: ಕೆಟ್ಟ ಆಡಳಿತವೇ ಎಲ್ಲ ಸಮಸ್ಯೆಗಳಿಗೆ ಮೂಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯ ಎಸ್‌ಆರ್‌ಸಿಸಿ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಭಾಷಣ ಮಾಡಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ನವದೆಹಲಿಯಲ್ಲಿ ನರೇಂದ್ರಮೋದಿ ಅವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.

"ನಾನು ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಹುಟ್ಟಿದ ನಾಡಿನವನು. ದೇಶಕ್ಕೆ ಸ್ವತಂತ್ರ ಬಂದು 60 ವರ್ಷಗಳು ಕಳೆದರೂ, ನಾವು ಸ್ವಯಂ ಆಡಳಿತ ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ. ಪ್ರಸಕ್ತ ಸನ್ನಿವೇಶಗಳು ದೇಶಕ್ಕೆ ಆಶಾದಾಯಕವಾಗಿಲ್ಲ. ಆದರೆ ನನಗೆ ವಿಶ್ವಾಸವಿದೆ ನಾವು ಈ ಸನ್ನಿವೇಶವನ್ನು ಬದಲಾಯಿಸಬಹುದು ಎಂದು ನರೇಂದ್ರ ಮೋದಿ ಹೇಳಿದರು.

"ಅಭಿವೃದ್ದಿಯಲ್ಲಿ ಗುಜರಾತ್ ಇಡೀ ವಿಶ್ವಕ್ಕೆ ಪ್ರಸಿದ್ಧಿಯಾಗಿದೆ. ಜನಪರ ಆಡಳಿತ ಮತ್ತು ಜನಪರ ನೀತಿಗಳಿಂದ ಎಂತಹುದೇ ಕ್ಲಿಷ್ಟ ಸಮಸ್ಯೆಗಳನ್ನು ನಿವಾರಿಸಬಹುದು. ಭಾರತ ವಿಶ್ವಕ್ಕೇ ದೊಡ್ಡ ಮಾರುಕಟ್ಟೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳ ಭಂಡಾರವಿದೆ. ನಾವು ನಿಜವಾಗಿಯೂ ಅವುಗಳನ್ನು ಸರಿಯಾದ ದಾರಿಯಲ್ಲಿ ಬಳಕೆ ಮಾಡುತ್ತಿಲ್ಲ. ಖನಿಜ ಸಂಪನ್ಮೂಲಗಳನ್ನು ನಾವು ಸದ್ಭಳಕೆ ಮಾಡಿಕೊಳ್ಳಬೇಕು. ಇಡೀ ದೇಶವೇ ಗುಜರಾತ್‌ನ ಹಾಲು ಮತ್ತು ಉಪ್ಪನ್ನು ತಿನ್ನುತ್ತಿದೆ. ಅಭಿವೃದ್ದಿ ವಿಷಯದಲ್ಲಿ ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗಿದೆ.

"ಹಾಲು ಉತ್ಪಾದನೆಯಲ್ಲಿ ಗುಜರಾತ್ ಶೇ.80 ರಷ್ಟು ಪ್ರಗತಿಯನ್ನು ಸಾಧಿಸಿದೆ. ಹಾಲು ಉತ್ಪಾದನೆಯಲ್ಲಿಯೂ ಗುಜರಾತ್ ದೇಶಕ್ಕೆ ಮಾದರಿಯಾಗಿದೆ. ದೇಶದಲ್ಲಿ ಅಂತರ್‌ಜಲ ಮಟ್ಟ ದಿನೇ-ದಿನೇ ಕುಸಿಯುತ್ತಿದೆ. ಆದರೆ ಗುಜರಾತ್‌ನಲ್ಲಿ ಅಂತರ್‌ಜಲ ಮಟ್ಟ ಹೆಚ್ಚಾಗುತ್ತಿದೆ. ದೇಶದ ಕೃಷಿ ಅಭಿವೃದ್ದಿ ದರ ಕೇವಲ ಶೇ.2ರಷ್ಟಿದ್ದರೆ, ಗುಜರಾತಿನಲ್ಲಿ ಶೇ.10 ರಷ್ಟಿದೆ. ದೇಶದ ಯುವಕರು ಉದ್ಯೋಗಕ್ಕಾಗಿ ಹೊರದೇಶಗಳಿಗೆ ಹಾರುತ್ತಿದ್ದಾರೆ. ಅದನ್ನು ತಡೆಯಬೇಕು. ಅವರಿಗೆ ಇಲ್ಲಿಯೇ ಸೂಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಮೋದಿ ತಿಳಿಸಿದರು.

ಈ ನಡುವೆ ನರೇಂದ್ರ ಮೋದಿ ಅವರ ಭಾಷಣಕ್ಕೆ ಕೆಲ ವಿದ್ಯಾರ್ಥಿ ಸಂಘಟನೆಗಳು ಅಡ್ಡಿ ಪಡಿಸಲು ಯತ್ನಿಸಿದವು. ಸಮಯ ಪ್ರಜ್ಞೆ ಮೆರೆದ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದರು.

ಒಟ್ಟಾರೆ ರಾಷ್ಟ್ರ ರಾಜಕಾರಣದತ್ತ ಮುಖಮಾಡಿರುವ ನರೇಂದ್ರ ಮೋದಿ ಆ ನಿಟ್ಟಿನಲ್ಲಿ ತಮ್ಮ ಮೊದಲ ಹೆಜ್ಜೆಯನ್ನು ಭರ್ಜರಿಯಾಗಿಯೇ ಇಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement