ಬಿಬಿಎಂಪಿಗೆ 20 ಸಾವಿರ ದಂಡ ವಿಧಿಸಿದ ಕೋರ್ಟ್
ಬಿಬಿಎಂಪಿ ವಿರುದ್ದ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 20 ಸಾವಿರ ದಂಡ ಹಾಕಲಾಗಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹೈಕೋರ್ಟ್ 20 ಸಾವಿರ ರು.ಗಳನ್ನು ದಂಡವಾಗಿ ವಿಧಿಸಿದೆ.
ಬಿಬಿಎಂಪಿ ವಿರುದ್ದ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 20 ಸಾವಿರ ದಂಡ ಹಾಕಲಾಗಿದೆ. 2011ರಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ಇದುವರೆವಿಗೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಜಸ್ವಂತಿ ಎಂಬುವವರು ಬಿಬಿಎಂಪಿ ವಿರುದ್ದ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ ಬಿಬಿಎಂಪಿ ಈ ಬಗ್ಗೆ ಯಾವುದೇ ಆಕ್ಷೇಪಣೆ ಸಲ್ಲಿಸಲಿಲ್ಲ. ಹೀಗಾಗಿ ನ್ಯಾಯಾಲಯ ಬಿಬಿಎಂಪಿ ದಂಡ ಹಾಕಿದೆ.
ಕೋಟಿಗಳ ಲೆಕ್ಕದಲ್ಲಿ ಟೆಂಡರ್ ಕರೆಯುವ ಬಿಬಿಎಂಪಿಗೆ 20 ಸಾವಿರ ದಂಡ ಯಾವ ಲೆಕ್ಕ. ಅದನ್ನೂ ಶ್ರೀ ಸಾಮಾನ್ಯನ ತಲೆಯ ಮೇಲೆ ಹೊರಿಸಿ ನ್ಯಾಯಾಲಯಕ್ಕೆ ದಂಡ ಕಟ್ಟುತ್ತದೆ.