ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಡಾರ್ ಸ್ಥಗಿತ: ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕ

ರಡಾರ್ ಕಾರ್ಯಸ್ಥಗಿತಗೊಳಿಸಿದ್ದರಿಂದ ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೆಲಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

Srinivasa Murthy VN
Updated On : 8 Feb 2013, 3:37 am

ನವದೆಹಲಿ: ರಡಾರ್ ಕಾರ್ಯಸ್ಥಗಿತಗೊಳಿಸಿದ್ದರಿಂದ ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೆಲಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ರಡಾರ್ ಇಂದು ಮಧ್ಯಾಹ್ನ 12.30ರ ಹೊತ್ತಿಗೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು. ಇದರಿಂದ ವಿಮಾನ ನಿಲ್ದಾಣದ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಟವರ್‌ನಲ್ಲಿನ ಸಿಬ್ಬಂದಿಗಳು ಆತಂಕಗೊಂಡಿದ್ದರು. ನಿಲ್ದಾಣಕ್ಕೆ ಬರುವ ಮತ್ತು ಹೋಗುವ ವಿಮಾನಗಳ ಕುರಿತು ಮಾಹಿತಿಗಳು ಲಭ್ಯವಾಗದೇ ನಿಲ್ದಾಣದ ಸಿಬ್ಬಂದಿಗಳು ಪರದಾಡುವಂತಾಗಿತ್ತು.

ನಿಲ್ದಾಣದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಲು ಅರ್ಧಗಂಟೆಗಳ ಕಾಲ ನಿಲ್ದಾಣಕ್ಕೆ ಬರುವ ಮತ್ತು ಹೊರಡುವ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. ನಿಲ್ದಾಣದಲ್ಲಿದ್ದ ತಜ್ಞರು ರಡಾರ್ ವ್ಯವ್ಯಸ್ಥೆಯನ್ನು ಪರಿಶೀಲಿಸಿದ್ದು, ಇದೀಗ ರಡಾರ್ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಡಾರ್ ವ್ಯವಸ್ಥೆಯು ನಿಲ್ದಾಣಕ್ಕೆ ಬರುವ ಮತ್ತು ಹೊಗುವ ವಿಮಾನಗಳ ಮಾಹಿತಿಯನ್ನು ಪೈಲಟ್‌ಗಳಿಗೆ ಮತ್ತು ಎಟಿಸಿ ಟವರ್‌ನ ಸಿಬ್ಬಂದಿಗಳಿಗೆ ರವಾನಿಸುವ ಕಾರ್ಯ ನಿರ್ವಹಿಸುತ್ತದೆ. ಈ ಹಿಂದೆಯೂ 2010ರಲ್ಲಿ ದೆಹಲಿಯ ವಿಮಾನ ನಿಲ್ದಾಣದ ರಡಾರ್ ಒಟ್ಟು 3 ಗಂಟೆಗೂ ಅಧಿಕ ಸಮಯ ಸ್ಥಗಿತಗೊಳ್ಳುವ ಮೂಲಕ ಸುಮಾರು 200 ವಿಮಾನಗಳ ವಿಳಂಬಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement