ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲಂಕಾ ಅಧ್ಯಕ್ಷರ ಭಾರತ ಪ್ರವಾಸಕ್ಕೆ ಭಾರಿ ವಿರೋಧ

ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಭಾರತ ಪ್ರವಾಸಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

Srinivasa Murthy VN
Updated On : 8 Feb 2013, 4:20 am

ಚೆನ್ನೈ: ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಭಾರತ ಪ್ರವಾಸಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಇಂದಿನಿಂದ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ರಾಜಪಕ್ಸೆ ಪ್ರವಾಸಕ್ಕೆ ತಮಿಳುನಾಡಿನಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ರಾಜಪಕ್ಸೆ ಅವರ ಪ್ರವಾಸವನ್ನು ವಿರೋಧಿಸಿ ಇಂದು ಚೆನ್ನೈನಲ್ಲಿ ಸ್ವತಃ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಚ್ಚರಿಯ ವಿಷಯವೆಂದರೆ ಈ ಪ್ರತಿಭಟನೆಗೆ ಆಡಳಿತಾರೂಢ ಎಐಡಿಎಂಕೆ ಪಕ್ಷದ ಸದಸ್ಯರೂ ಕೈ ಜೋಡಿಸಿದ್ದಾರೆ. ಅಧ್ಯಕ್ಷ ರಾಜಪಕ್ಸೆ ಅವರು ಶ್ರೀಲಂಕಾದಲ್ಲಿ ತಮಿಳಿಗರನ್ನು ತುಚ್ಛವಾಗಿ ಕಾಣುತ್ತಿದ್ದಾರೆ. ಅಲ್ಲದೆ ಶ್ರೀಲಂಕಾದಲ್ಲಿ ತಮಿಳು ಭಾಷೆಯ ನಾಶಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಇಂದು ರಾಜಪಕ್ಸೆ ಅವರ ಪ್ರತಿಕೃತಿ ದಹಿಸಿದ್ದಾರೆ.

ಈ ನಡುವೆ ಇಂದು ಸಂಜೆ ಭಾರತಕ್ಕೆ ಆಗಮಿಸುವ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು 3 ದಿನಗಳ ಕಾಲ ಭಾರತದಲ್ಲಿಯೇ ತಂಗಲಿದ್ದಾರೆ. ಇಂದು ಸಂಜೆ ಶ್ರೀಲಂಕಾದ ಕೊಲಂಬೋ ವಿಮಾನ ನಿಲ್ದಾಣದಿಂದ ನೇರವಾಗಿ ತಿರುಪತಿಗೆ ಆಗಮಿಸುವ ರಾಜಪಕ್ಸೆ, ನಾಳೆ ತಿರುಮಲಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಹೀಗಾಗಿ ಇಂದು ರಾತ್ರಿಯೇ ಅವರು ತಿರುಮಲಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜಪಕ್ಸೆಗಾಗಿ ತಿರುಮಲದ ಖ್ಯಾತ ಶ್ರೀಪದ್ಮಾವತಿ ಗೆಸ್ಟ್‌ಹೌಸ್ ಅನ್ನು ಕಾಯ್ದಿರಿಸಲಾಗಿದೆ. ಅಲ್ಲದೆ ರಾಜಪಕ್ಸೆ ಪ್ರವಾಸಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಗೆಸ್ಟ್ ಹೌಸ್ ಸುತ್ತ-ಮುತ್ತ "ಜೆಡ್‌' ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಕಳೆದ ವರ್ಷವೂ ಆಗಮಿಸಿದ್ದ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಏಪ್ರಿಲ್ 2 ರಂದು ತಿರುಪತಿಗೆ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement