ಭಾರಿ ಹಿಮಪಾತ: ಈಶಾನ್ಯ ಅಮೇರಿಕ ಸ್ಥಬ್ದ
ಅಮೇರಿಕದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಿಮ ಬೀಳುತ್ತಿದ್ದು, ಜನಜೀವನ ತೀವ್ರ ಅಸ್ತವ್ಯಸ್ಥಗೊಂಡಿದೆ. 30 ರಿಂದ 75 ಸೆಂ.ಮೀ ಗಾತ್ರದಲ್ಲಿ ಹಿಮಬೀಳುತ್ತಿದೆ.
ನ್ಯೂಯಾರ್ಕ್: ಅಮೇರಿಕಾದಲ್ಲಿ ಭಾರಿ ಹಿಮಪಾತ ಬೀಳುತ್ತಿದ್ದು, ಈಶಾನ್ಯ ಅಮೇರಿಕದ 5 ಪ್ರಮುಖ ರಾಜ್ಯಗಳು ಸ್ಥಬ್ದಗೊಂಡಿವೆ.
ಅಮೇರಿಕದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಿಮ ಬೀಳುತ್ತಿದ್ದು, ಜನಜೀವನ ತೀವ್ರ ಅಸ್ತವ್ಯಸ್ಥಗೊಂಡಿದೆ. 30 ರಿಂದ 75 ಸೆಂ.ಮೀ ಗಾತ್ರದಲ್ಲಿ ಹಿಮಬೀಳುತ್ತಿದೆ. ತೀವ್ರ ಚಳಿ ಮತ್ತು ಭಾರಿ ಹಿಮದಿಂದಾಗಿ ರಸ್ತೆಗಳು ಮುಚ್ಚಿಹೋಗಿವೆ. ರಸ್ತೆಯಲ್ಲಿ ತುಂಬಿರುವ ಹಿಮವನ್ನು ತೆರವುಗೊಳಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಪಾಲಿಕೆ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ. ಆದರೆ ಸಿಬ್ಬಂದಿಗಳ ಕಾರ್ಯಕ್ಕೆ ತೀವ್ರ ಚಳಿ ತಡೆಯಾಗಿ ಪರಿಣಮಿಸಿದೆ.
ಆಗಸದಲ್ಲಿ ದಟ್ಟ ಮಂಜು ಆವರಿಸಿದ್ದು, ಕೇವಲ ಇಂದು ಒಂದೇ ದಿನದಲ್ಲಿ ಸುಮಾರು 1000 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 56 ರಿಂದ 64 ಕಿ.ಮೀ ವೇಗದಲ್ಲಿ ಶೀತಗಾಳಿ ಬೀಸುತ್ತಿದ್ದು, ತೀವ್ರ ಚಳಿಯಿಂದಾಗಿ ಓರ್ವ ಸಾವನ್ನಪ್ಪಿದ್ದಾನೆ. ಭಾರಿ ಹಿಮದಿಂದಾಗಿ ಅಣುಶಕ್ತಿ ಕೇಂದ್ರಗಳು ಸ್ಥಗಿತಗೊಂಡಿದ್ದು ಈಶಾನ್ಯ ಅಮೇರಿಕದ ಬಹುತೇಕ ರಾಜ್ಯಗಳಲ್ಲಿ ಕತ್ತಲು ಆವರಿಸಿದೆ.
ಹೀಗಾಗಿ ಈಶಾನ್ಯ ಅಮೇರಿಕದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.