ಇರಾಕ್‌ನಲ್ಲಿ ಕಾರ್ ಬಾಂಬ್ ಸ್ಪೋಟ: 31 ಸಾವು
ಇರಾಕ್ ದೇಶದಲ್ಲಿ ಭಾನುವಾರ 4 ಕಡೆಗಳಲ್ಲಿ ಸಂಭವಿಸಿದ ಕಾರ್‌ಬಾಂಬ್ ಸ್ಪೋಟದಲ್ಲಿ ಕನಿಷ್ಟ 31 ಮಂದಿ ಸಾವನ್ನಪ್ಪಿದ್ದಾರೆ.
ಬಾಗ್ದಾದ್: ಇರಾಕ್ ದೇಶದಲ್ಲಿ ಭಾನುವಾರ 4 ಕಡೆಗಳಲ್ಲಿ ಸಂಭವಿಸಿದ ಕಾರ್‌ಬಾಂಬ್ ಸ್ಪೋಟದಲ್ಲಿ ಕನಿಷ್ಟ 31 ಮಂದಿ ಸಾವನ್ನಪ್ಪಿದ್ದಾರೆ.
ಬಾಗ್ದಾದ್‌ನ ಶಿಯಾ ಜಿಲ್ಲೆಯ ಪಕ್ಷಿ ಮಾರುಕಟ್ಟೆಯಲ್ಲಿ ಮೊದಲ ಸ್ಪೋಟ ಸಂಭವಿಸಿದೆ. ನಂತರ ಹಿಲ್ಲಾದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಸಂಭವಿಸಿದ ಮತ್ತೊಂದು ಸ್ಪೋಟದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಶಿಯಾದಲ್ಲಿರುವ ಪಕ್ಷಿ ಮಾರುಕಟ್ಟೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸ್ಪೋಟಕ ಅಳವಡಿಸಿ ಸ್ಪೋಟಗೊಳಿಸಲಾಗಿದೆ. ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯಲ್ಲಿ 11ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಕನಿಷ್ಟ 50 ಮಂದಿ ಗಾಯಗೊಂಡಿದ್ದಾರೆ.
ಸ್ಪೋಟದ ತೀವ್ರತೆಗೆ ಮಾರುಕಟ್ಟೆಯ ಒಂದು ಬದಿಯ ಗೋಡೆ ಕುಸಿದಿದೆ. ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಭದ್ರತಾಪಡೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಸ್ಪೋಟದಿಂದಾಗಿ ಪಂಜಗಳಲ್ಲಿದ್ದ ವಿವಿಧ ಜಾತಿಯ ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ. ಅಂತೆಯೇ ಹಿಲ್ಲಾದ ತರಕಾರಿ ಮಾರುಕಟ್ಟೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರ್‌ಗಳಲ್ಲಿ ಬಾಂಬ್ ಅಳವಡಿಸಿ ಸ್ಪೋಟಗೊಳಿಸಲಾಗಿದೆ.
ಇದುವರೆವಿಗೂ ಸ್ಪೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.