ಮಂಗಳನ ಆಂತರ್ಯ ಬಗೆದ ಕ್ಯೂರಿಯಾಸಿಟಿ
ಮಂಗಳಗ್ರಹಕ್ಕೆ ನಾಸಾ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ನೆಲವನ್ನು ಕೊರೆದು ಮಣ್ಣಿನ ಮಾದರಿಯನ್ನು ಭೂಮಿಗೆ ರವಾನಿಸಿದೆ.
ನವದೆಹಲಿ: ಮಂಗಳಗ್ರಹಕ್ಕೆ ನಾಸಾ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ನೆಲವನ್ನು ಕೊರೆದು ಮಣ್ಣಿನ ಮಾದರಿಯನ್ನು ಭೂಮಿಗೆ ರವಾನಿಸಿದೆ.
ಇದೇ ಮೊದಲ ಬಾರಿಗೆ ಕ್ಯೂರಿಯಾಸಿಟಿ ತನ್ನ ಆನ್ಬೋರ್ಡ್ ಡ್ರಿಲ್ಲಿಂಗ್ ಅನ್ನು ಬಳಸಿ ಮಂಗಳ ಗ್ರಹದ ನೆಲವನ್ನು ಕೊರೆದಿದೆ. ನಾಸಾ ಮೂಲಗಳ ಪ್ರಕಾರ ಇದೇ ಮೊದಲ ಬಾರಿಗೆ ಮಾನವ ನಿರ್ಮಿತ ರೊಬೋಟ್ವೊಂದು ಅನ್ಯಗ್ರಹದ ಕಲ್ಲನ್ನು ಕೊರೆದು ಮಾದರಿಯನ್ನು ಸಂಗ್ರಹಿಸಿರುವುದು ನೂತನ ದಾಖಲೆಯಾಗಿದೆ.
ಮಂಗಳನ ನೆಲದ ಒಟ್ಟು 0.63 ಇಂಚು ಅಗಲ ಮತ್ತು 2.5 ಇಂಚು ಆಳ ಕೊರೆದಿರುವ ಕ್ಯೂರಿಯಾಸಿಟಿ, ಆರ್ದ್ರ ವಾತಾವರಣದಲ್ಲಿ ಡ್ರಿಲ್ಲಿಂಗ್ ನಡೆಸಿ ಕಲ್ಲಿನ ಪುಡಿಯನ್ನು ತನ್ನಲ್ಲಿ ಅಳವಡಿಸಲಾಗಿರುವ ಮಿನಿ ಲ್ಯಾಬೊರೇಟರಿಯಲ್ಲಿ ಪರೀಕ್ಷೆ ನಡೆಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇದು ಕೂಡ ನೂತನ ದಾಖಲೆಯಾಗಿದೆ. ಕ್ಯೂರಿಸಿಟಿ ರೋವರ್ನ ಈ ಸಾಧನೆ ನಾಸಾ ಹೆಮ್ಮೆ ಪಡುವಂತೆ ಮಾಡಿದೆ.
ಭೂಮಿಯಿಂದ ಉಡಾವಣೆಯಾದ ಕ್ಯೂರಿಯಾಸಿಟಿ ರೋವರ್ ಕಳೆದ ವರ್ಷದ ಆಗಸ್ಟ್ನಲ್ಲಿ ಮಂಗಳ ಅಂಗಳ ತಲುಪಿತ್ತು.